ಭೈರನಟ್ಟಿ, ನಾಗನೂರ ಪಿಎಚ್‌ಸಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮೂಡಲಗಿ: ತಾಲೂಕಿನ ಭೈರನಟ್ಟಿ, ನಾಗನೂರ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಬಾರದಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ಸರ್ಕಾರ ಜನಸಾಮಾನ್ಯರ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ, ವೈದ್ಯರನ್ನು ನೇಮಿಸಿದೆ. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಹಾಜರಾಗದಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದೂ ಇಲ್ಲದಂತಾಗಿದೆ. ಈ ಪಿಎಚ್‌ಸಿ ಕೇಂದ್ರಗಳಿಗೆ ವೈದ್ಯರು ತಮಗೆ ತಿಳಿದಾಗ ಬರುತ್ತಿದ್ದು, ಕೇವಲ 2-3 ಗಂಟೆ ಕಾರ್ಯನಿರ್ವಹಿಸಿ ತೆರಳುತ್ತಿರುವುದರಿಂದ ಗ್ರಾಮಸ್ಥರು ಅನಾರೋಗ್ಯ ಸಂದರ್ಭದಲ್ಲಿ ಪಟ್ಟಣ, ನಗರಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕೆಮ್ಮು, ನೆಗಡಿ, ಜ್ವರದಂತಹ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ದಿನನಿತ್ಯ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಗ್ರಾಮದಿಂದ 11 ಕಿಮೀ. ಅಂತರದಲ್ಲಿರುವ ಮೂಡಲಗಿ ಪಟ್ಟಣಕ್ಕೆ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಈ ಕುರಿತು ಹಲವು ಬಾರಿ ಮೇಲಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಅಲ್ಲಿನ ರೋಗಿಗಳ ಅಳಲಾಗಿದೆ.
ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ: ಭೈರನಟ್ಟಿ, ನಾಗನೂರ ಗ್ರಾಮಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿಗಳು ಸರಿಯಾಗಿ ಆಸ್ಪತ್ರೆಗೆ ಬಾರದಿರುವ ಕಾರಣ ರೋಗಿಗಳಿಗೆ ತುಂಬ ತೊಂದರೆ ಉಂಟಾಗುತ್ತಿದ್ದು, ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ.ಈ ಕುರಿತು ಮೇಲಾಕಾರಿಗಳ ಗಮನಕ್ಕೆ ತರಲಾಗಿದೆ. ಕ್ರಮ ಕೈಗೊಳ್ಳದೆ ಇದ್ದಲ್ಲಿ ಆಸ್ಪತ್ರೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಅನಾರೋಗ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿದರೆ ಅಲ್ಲಿ ವೈದ್ಯರೇ ಇರುವುದಿಲ್ಲ. ಪಕ್ಕದ ಮೂಡಲಗಿ ಪಟ್ಟಣವನ್ನೆ ಅವಲಂಬಿಸಬೇಕಾಗಿದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಆಗಮಿಸುವ ವೈದ್ಯರು ಎರಡು ಗಂಟೆ ಮಾತ್ರ ಕಾರ್ಯ ನಿರ್ವಹಿಸಿ ಮರಳುತ್ತಿದ್ದಾರೆ. ಇದರಿಂದಾಗಿ ರೋಗಿಗಳಿಗೆ ತುಂಬ ತೊಂದರೆ ಉಂಟಾಗುತ್ತಿದೆ.ಪದ್ಮಾಕರ ಉಂದ್ರಿ ಭೈರನಟ್ಟಿ ಗ್ರಾಮಸ್ಥ
ವೈದ್ಯರ ಕರ್ತವ್ಯಲೋಪ ಹಾಗೂ ಹಗಲಲ್ಲೂ ಆಸ್ಪತ್ರೆಯ ಬಾಗಿಲು ಹಾಕಿದ ಬಗ್ಗೆ ೆಟೋ ಸಮೇತ ಸಾರ್ವಜನಿಕರು ದೂರು ನೀಡಿದ್ದಾರೆ. ಸರಿಯಾಗಿ ಕಾರ್ಯ ನಿರ್ವಹಿಸದ ನಾಗನೂರು ಮತ್ತು ಭೈರನಟ್ಟಿ ಗ್ರಾಮದ ಪಿಎಚ್‌ಸಿ ವೈದ್ಯರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.ಡಾ.ಮಹೇಶ ಕೋಣಿ ಡಿಎಚ್‌ಒ ಬೆಳಗಾವಿ