ಜಿಲ್ಲೆ

ವೈದ್ಯರಿಗೆ ಇರಬೇಕು, ಸಮಯ ಪ್ರಜ್ಞೆ, ವೃತ್ತಿ ನಿಷ್ಠೆ

ಚಿತ್ರದುರ್ಗ: ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಅಮೂಲ್ಯವಾದ ಪ್ರಾಣ ಉಳಿಸುವ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯವಿಶ್ರಾಂತ ನೌಕರರ ಸಾಂಸೃತಿಕ ಕ್ರೀಡಾ, ಮನೋರಂಜನಾ ಕೇಂದ್ರ ಹೊಳಲ್ಕೆರೆ ಶಾಖೆ ಹಾಗೂ ಮಾರುತಿ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಕೆಂಗುಂಟೆ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶುವೈದ್ಯರ ಸೇವೆ ಕೂಡ ಅಂತ್ಯ ಶ್ರೇಷ್ಠವಾಗಿದೆ. ಆದ್ದರಿಂದ ವೈದ್ಯರು ಸಮಯಪ್ರಜ್ಞೆ ಮತ್ತು ಕರ್ತವ್ಯದಲ್ಲಿ ನಿಷ್ಠೆ ಹೊಂದಿರಬೇಕು. ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇತರರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಪಾಂಡೋಮಟ್ಟಿ ಕಮ್ಮತ್ತಳ್ಳಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಎನ್.ಸಿ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಸಂಸ್ಥಾಪಕ ಕೆಂಗುಂಟೆ ಡಿ.ಎಚ್. ಪರಮೇಶ್ವರಪ್ಪ, ರಾಜ್ಯ ವಿಶ್ರಾಂತ ನೌಕರರ ಸಾಂಸ್ಕೃತಿಕ ಕ್ರೀಡೆ, ಮನರಂಜನಾ ಕೇಂದ್ರದ ಅಧ್ಯಕ್ಷ ಎಲ್.ಬಿ. ರಾಜಪ್ಪ ಕೆಂಗುಂಟೆ ಇದ್ದರು. ವೈದ್ಯರಾದ ಡಾ.ಎಸ್.ಬಿ. ಲಕ್ಕೋಳ್, ಡಾ.ಎನ್.ಸಿ. ಪ್ರಸಾದ್, ಡಾ.ಡಿ.ಎಚ್. ಅಶ್ವಿನಿ, ಡಾ.ಎಲ್.ಜಿ. ಕಿರಣ್, ಡಾ.ಎನ್.ಇ. ಶ್ರೀಪತಿ, ಡಾ.ಟಿ.ಎಸ್. ಲಕ್ಕೋಳ್, ಡಾ.ಎಲ್.ಪಿ. ಪವನ, ಎಲ್.ಪಿ. ಪೂಜಾ, ಡಾ.ಎನ್.ಎಸ್.ಪಾವನಾ, ಡಾ. ಡಿ.ಆರ್. ದಾಕ್ಷಾಯಿಣಿ, ಡಾ.ಎನ್.ಸಿ. ಪ್ರವೀಣ್, ಡಾ. ಕೆ.ಜಿ. ರಶ್ಮಿ, ಡಾ.ಎಲ್.ಜೆ. ಲೋಹಿತ್‌ಕುಮಾರ್, ಡಾ.ಎಲ್.ಪಿ. ರಾಜು, ಡಾ. ಶುಭ, ಡಾ. ಹೇಮಂತ್ ಉಪಾಧ್ಯಾಯ, ಡಾ.ಎಸ್.ಇ. ಸಂದೇಶ್ ಕುಮಾರ್‌ಲಕ್ಕೋಳ್, ಪಶು ವೈದ್ಯರಾದ ಡಾ.ಒ.ಎಸ್. ಪ್ರಕಾಶ್, ಡಾ. ಸತೀಶ್ ಎಚ್. ಗಟ್ಟಿ, ಪಿಎಚ್‌ಡಿ ಪದವೀಧರ ಬಿ. ರಾಜಪ್ಪ, ಪ್ರಭಾಕರ್ ಲಕ್ಕೋಳ, ಎಸ್.ಪಿ. ರವಿ, ಎನ್.ಬಿ. ಗಟ್ಟಿ, ಜಿ.ಸಿ. ಕುಬೇರಪ್ಪ, ಕೆ.ಎನ್. ಜ್ಞಾನೇಶ, ಟಿ.ಆರ್. ಶಶಿಧರ, ಎಲ್.ಎಂ. ಮಂಜುನಾಥ, ಸವಿತಾ ಜಿ. ಲಕ್ಕೋಳ್ ಅವರನ್ನು ಸನ್ಮಾನಿಸಲಾಯಿತು.