ಚಾಮರಾಜನಗರ: ವೈದ್ಯಕೀಯ ಕೇತ್ರದ ಬೆಳವಣಿಗೆಯಲ್ಲಿ ವೈದ್ಯರು, ಶುಶ್ರೂಷಕರ ಜತೆ ಶಸ್ತ್ರಚಿಕಿತ್ಸಾ ತಜ್ಞರ ಪಾತ್ರವೂ ಅತ್ಯಂತ ಅಮೂಲ್ಯವಾಗಿದೆ ಎಂದು ಚಾಮರಾಜನಗರ ವೈದ್ಯಕೀಯ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಮಹೇಶ್ ತಿಳಿಸಿದರು.
ನಗರದ ಜೆಎಸ್‌ಎಸ್‌ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾಲೇಜು ಜೆಎಸ್‌ಎಸ್ ಕಾಲೇಜ್ ಆ್
ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಜೆಎಸ್‌ಎಸ್ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಅರಿವಳಿಕೆ ಹಾಗೂ ಆಪರೇಷನ್ ಥಿಯೇಟರ್ ತಂತಜ್ಞರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಗಿಗಳಿಗೆ ಅನಾರೋಗ್ಯ ಉಲ್ಬಣಗೊಂಡಾಗ ಅವರು ಪ್ರತಿಬಾರಿಯೂ ವೈದ್ಯರು, ಶುಶ್ರೂಷಕರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಾರೆ. ಶಸ್ತ್ರಚಿಕಿತ್ಸೆಯ ವಿಚಾರಕ್ಕೆ ಬಂದಾಗ ಅರಿವಳಿಕೆ ಹಾಗೂ ಆಪರೇಷನ್ ಥಿಯೇಟರ್ ತಂತಜ್ಞರನ್ನು ಒಂದು ಬಾರಿಯಷ್ಟೇ ನೋಡುತ್ತಾರೆ. ಅರಿವಳಿಕೆ ಚುಚ್ಚುಮದ್ದು ಕೊಡುವುದರಿಂದ ಹಿಡಿದು, ಶಸ್ತ್ರಚಿಕಿತ್ಸೆ ಮುಗಿಸಿ, ಹೊರಗೆ ಕಳುಹಿಸುವವರೆಗೂ ಅವರ ಮೇಲೆ ಮಹತ್ವದ ಜವಾಬ್ದಾರಿ ಇರುತ್ತದೆ. ಆಪರೇಷನ್ ಥಿಯೇಟರ್ ತಂತಜ್ಞರ ವೃತ್ತಿ ಒತ್ತಡದ ಕೆಲಸವಾದರೂ, ಒಳ್ಳೆಯ ಅನುಭವವನ್ನು ಒದಗಿಸುತ್ತದೆ.
ಸಿಮ್ಸ್ ಆಸ್ಪತ್ರೆ ಅನಸ್ತೇಷಿಯಾ ವಿಭಾಗದ ಪ್ರಭಾರ ಮುಖ್ಯಸ್ಥ ಡಾ.ಎಂ.ಎಸ್.ದರ್ಶನ್ ಮಾತನಾಡಿ, ಹಿರಿಯ ತಂತ್ರಜ್ಞರಾದ ಶಾಲಲಾಮ್ ಹಾಗೂ ಪ್ರಮೀಳಾಬಜಾಜ್ ಅವರು 2016ರಲ್ಲಿ ಈ ದಿನಾಚರಣೆಯನ್ನು ಆರಂಭಿಸಿದರು. ನಿಲ್ದಾಣದಿಂದ ವಿಮಾನ ಟೇಕಾಪ್ ಆಗುವವರೆಗೆ ತಂತ್ರಜ್ಞರು ಯಾವ ರೀತಿ ತಪಾಸಣೆ ಮಾಡುವರೋ ಹಾಗೇ, ಅರಿವಳಿಕೆ ಕೊಡುವ ಸಿಬ್ಬಂದಿ ಆಪರೇಷನ್ ಪರಿಕರಗಳನ್ನು ತಪಾಸಣೆ ಮಾಡಬೇಕು. ಆಪರೇಷನ್ ಥಿಯೇಟರ್‌ತಂತ್ರಜ್ಞರಿಗೆ ಒದಗಿಸಬೇಕು. ಆಪರೇಷನ್ ಥಿಯೇಟರ್ ತಂತ್ರಜ್ಞರು ಒತ್ತಡಕ್ಕೆ ಒಳಗಾದರೆ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಅಪರೇಷನ್ ಥಿಯೇಟರ್ ವಸ್ತುಪ್ರದರ್ಶನದಲ್ಲಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಜಿ.ವಿನಯ್ ಕುಮಾರ್, ಜೆಎಸ್‌ಎಸ್ ಕಾಲೇಜ್ ಆ್ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಸಂಚಾಲಕ ಶಿವನಂಕಾರಪ್ಪ, ಜೆಎಸ್‌ಎಸ್ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ವಿಕಾಸ್‌ನಂದಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.