ಜಿಲ್ಲೆ

ವೈದ್ಯರನ್ನು ಗೌರವಿಸುವ ಮನೋಭಾವ ಬೆಳೆಯಲಿ

ಯಾದಗಿರಿ: ರೋಗಿಗಳ ಶುಶ್ರೂಷೆ ಮಾಡಲು ಹಗಲಿರುಳು ಶ್ರಮಿಸುವ ವೈದ್ಯರನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ನಿವೃತ್ತ ಯೋಧ ಬಿ.ತಾಯಪ್ಪ ಹೇಳಿದರು.

ನಗರದ ಆಶೀರ್ವಾದ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕರುಣೆ ಮತ್ತು ಕಾಳಜಿಯೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಮತ್ತು ಆತ್ಮಸ್ಥೆÊರ್ಯ ತುಂಬುವ ವೈದ್ಯರನ್ನು ಅವಮಾನಿಸುವ ಕಿಡಿಗೇಡಿಗಳ ಕೃತ್ಯ ಅಲ್ಲಲ್ಲಿ ನಡೆಯುತ್ತಿರುವುದು ದುರಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಹೀನ ಕೃತ್ಯಗಳು ನಿಲ್ಲಬೇಕು. ದೇಶಕ್ಕೆ ಗಂಡಾAತರ ಬಂದರೆ ಯೋಧರು ಪ್ರಾಣದ ಹಂಗುತೊರೆದು ಹೋರಾಟ ಮಾಡುತ್ತಾರೆ. ಅದೇ ರೀತಿ ದೇಹಕ್ಕೆ ತೊಂದರೆಯಾದರೆ ವೈದ್ಯರು ತಮ್ಮ ವೈಯಕ್ತಿಕ ಬದುಕು ಕೂಡ ಲೆಕ್ಕಿಸದೆ ರೋಗ ನಿವಾರಣೆಗೆ ಶ್ರಮಿಸುತ್ತಾರೆ. ಅಂತಹ ವೈದ್ಯ ವೃತ್ತಿ ನಿಜಕ್ಕೂ ಪವಿತ್ರವಾಗಿದೆ ಎಂದರು.

ಆಶೀರ್ವಾದ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎಂ.ಪಾಟೀಲ್ ಮಾತನಾಡಿ, ವೈದ್ಯರಿಗೆ ಎಲ್ಲ ರೋಗಿಗಳು ಸಮಾನರು. ಯಾವುದೇ ತಾರತಮ್ಯ ಇಲ್ಲದೆ ನಮ್ಮಲ್ಲಿ ಬಂದ ರೋಗಿಗಳಿಗೆ ಚಿಕಿತ್ಸೆ ಕೊಡುವುದು ಮಾತ್ರ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಪ್ರತಿಯೊಬ್ಬ ರೋಗಿಯ ರೋಗ ನಿವಾರಣೆಗೆ ನಾವು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ರೋಗಿಗಳು ಕೂಡ ವೈದ್ಯರು ಹೇಳಿದ ನಿಯಮ ಪಾಲಿಸಿದರೆ ಶೀಘ್ರ ಗುಣಮುಖರಾಗಬಹುದು ಎಂದು ಹೇಳಿದರು.

ಆರೋಗ್ಯ ರP್ಷÀಣೆಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಯೋಗ, ವ್ಯಾಯಾಮ ಮತ್ತು ಹಿತಮಿತ ಆಹಾರ ಸೇವನೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೊಸಳ್ಳಿಯ ಮಹಾಂತ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ನೇತ್ರತಜ್ಞ ಡಾ.ಭೀಮರೆಡ್ಡಿ ಪಾಟೀಲ್ ಅರಶಿಣಿಗಿ, ಡಾ.ಬಸವರಾಜ ಮುಂಬಯಿ, ಡಾ.ನಾಗರಾಜ ಗೌಳಿ, ತನಾರತಿ ಪ್ರತಿಷ್ಠಾನದ ಅಧ್ಯP್ಷÀ ಡಾ.ಸಿದ್ದರಾಜರಡ್ಡಿ, ಡಾ.ದೃವ ಭೀಮರಡ್ಡಿ, ಸೂಗಣ್ಣಗೌಡ ಪೊಲೀಸ್ ಪಾಟೀಲ್ ನಾಲವಾರ ಇತರರಿದ್ದರು. ಶ್ರೀನಿವಾಸ ನಾಯ್ಕಲï ಸ್ವಾಗತಿಸಿದರು.