ಬೆಳಗಾವಿ: ಕರೊನಾ ಮೊದಲ ಮತ್ತು 2ನೇ ಅಲೆಯಲ್ಲಿ ಜೀವದ ಹಂಗು ತೊರೆದು ಸೋಂಕಿತರ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ವೈದ್ಯರ ಕಾರ್ಯ ಶ್ಲಾಘನೀಯ ಎಂದು ಲೋಟಸ್ ಆಸ್ಪತ್ರೆ ನಿರ್ದೇಶಕ ಡಾ.ಅನಿಲ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಮಂಡೋಳಿ ರಸ್ತೆಯ ವ್ಯಾಕ್ಸಿನ್‌ಡಿಪೋ ಬಳಿ ಇರುವ ಲೋಟಸ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ನರ್ಸಿಂಗ್, ಲ್ಯಾಬ್ ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದರು. ವೈದ್ಯಾಧಿಕಾರಿಗಳಾದ ಡಾ.ಗುರುರಾಜ ಜಮಾದಾರ, ಡಾ.ಸತೀಶ ಕೌಜಲಗಿ, ಡಾ.ನಜೀರ್, ಡಾ.ಸತೀಶ, ಆಡಳಿತಾಧಿಕಾರಿ ಆನಂದ ಕೌಜಲಗಿ, ಸುನೀಲ ಪಟ್ಟಣ ಸೇರಿದಂತೆ ಲ್ಯಾಬರೋಟರಿ, ನರ್ಸಿಂಗ್, ಫಾರ್ಮಸಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಡಾ.ಅಮರ ಪಾಟೀಲ, ಡಾ.ರಮೇಶ ತೇಜಣ್ಣವರ, ಡಾ.ಎಸ್.ಎಂ.ದೊಡಮನಿ, ಡಾ.ಶ್ರೀಕಾಂತ ಅಸ್ಕಿ ಮತ್ತಿತರರು ಉಪಸ್ಥಿತರಿದ್ದರು.