ಜಿಲ್ಲೆ

ವೈದ್ಯರ ಸಲಹೆಯಿಲ್ಲದ ಔಷಧ ನೀಡಬೇಡಿ

ಔಷಧ ನಿಯಂತ್ರಣ ಹಿರಿಯ ಅಧಿಕಾರಿ ಮಲ್ಲಿಕಾರ್ಜುನ ನಾಗೂರ್​ ಸಲಹೆ

ಶಿರಾ:ಸರ್ಕಾರ ಡ್ರಗ್ಸ್​ ಮಾರಾಟಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದ್ದರೂ ಮಕ್ಕಳು ಹಾಗೂ ಯುವಕ, ಯುವತಿಯರು, ಡ್ರಗ್ಸ್​ಗೆ ಸಂಬಂಧಪಟ್ಟ ಔಷಧಗಳನ್ನು ಚುಚ್ಚುಮದ್ದು ಮೂಲಕ ಇಂಜೆಕ್ಟ್​ ಮಾಡಿಕೊಂಡು ದಾರಿ ತಪ್ಪುತಿದ್ದಾರೆ. ಮೆಡಿಕಲ್​ ಸ್ಟೋರ್​ ಮಾಲೀಕರು ಔಷಧಗಳನ್ನು ವೈದ್ಯರ ಸಲಹೆಯಿಲ್ಲದೆ ವಿತರಿಸಬಾರದು ಎಂದು ಔಷಧ ನಿಯಂತ್ರಣ ಹಿರಿಯ ಅಧಿಕಾರಿ ಮಲ್ಲಿಕಾರ್ಜುನ ನಾಗೂರ್​ ಸೂಚಿಸಿದರು.

ನಗರದ ಮಂಜುಶ್ರೀ ಕನ್ವೆನ್ಸನ್​ ಹಾಲ್​ನಲ್ಲಿ ಸೋಮವಾರ ತಾಲೂಕು ಔಷಧ ವ್ಯಾಪಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ವರ್ಲ್ಡ್​ ಫಾರ್ಮಸಿಸ್ಟ್​ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಗಿಗಳು ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿ, ರೋಗಿ ವಾಸಿಗೆ ಪೂರಕ ಔಷಧ ತೆಗುದುಕೊಳ್ಳಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದರು.

ಔಷಧ ನಿಯಂತ್ರಣದ ಕಿರಿಯ ಅಧಿಕಾರಿ ಚಂದ್ರಕಲಾ ಶಿಲ್ಪಾ, ಮೆಡಿಕಲ್​ ಸ್ಟೋರ್​ಗಳಲ್ಲಿ ಯಾವುದೇ ಕಾರಣಕ್ಕೂ ರೋಗಿಗಳಿಗೆ

ಔಷಧ ಚೀಟಿ ಇಲ್ಲದೆ ಔಷಧ ಮಾರಾಟ ಮಾಡಬಾರದು. ಅಲ್ಲದೇ ಔಷಧ ಖರೀದಿಸಿದ ಗ್ರಾಹಕರಿಗೆ ಬಿಲ್​ ನೀಡುವುದರ ಜತೆಗೆ ದಿನನಿತ್ಯದ ಔಷಧ ನಿರ್ವಹಣೆ ಬಗ್ಗೆ ಮಾಲೀಕರು ಹೆಚ್ಚು ಗಮನಹರಿಸಬೇಕು ಎಂದರು.ಮೆಡಿಕಲ್​ ಸ್ಟೋರ್​ನಲ್ಲಿ ಕೆಲಸ ನಿರ್ವಹಿಸುವವರು ರೋಗಿಗಳಿಗೆ ಸರಿಯಾದ ರೀತಿ ಮಾರ್ಗದರ್ಶನ ನೀಡಿ, ಅವರಿಗೆ ಅವಶ್ಯಕತೆ ಇರುವಷ್ಟು ಔಷಧಗಳನ್ನುಮಾತ್ರ ನೀಡಿ, ಅದರ ಉಪಯೋಗದ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಶಿರಾ ತಾಲೂಕು ಔಷಧ ವಿತರಕರ ಸಂಘ ಅಧ್ಯಕ್ಷ ದೀಪ್ತಿ ಮೆಡಿಕಲ್​ ಮಂಜುನಾಥ್​, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪಂಡಿತ್​ ಜವಾಹರ್​, ಶಿರಾ ತಾಲೂಕು ಔಷಧ ವ್ಯಾಪಾರ ಸಂಘದ ಉಪಾಧ್ಯಕ್ಷ ನಂದಿನಿ, ಮೆಡಿಕಲ್​ ಮಾಲೀಕರಾದ ಶ್ರೀಧರ ಗುಪ್ತ, ಕಾರ್ಯದರ್ಶಿ, ಅಶ್ವತ್ಥ ನಾರಾಯಣ್​, ಬಿ.ಎಚ್​.ಅನಿಲ್​ ಕುಮಾರ್​, ಡಿ.ನಾರಾಯಣಪ್ಪ, ಖಜಾಂಚಿ ಸುಧಾಕರ್​. ಜಿ.ಗೋಪಿನಾಥ್​, ಶ್ರೀನಿವಾಸ್​, ಜಿ.ಚಂದ್ರಣ್ಣ, ಗಜೇಂದ್ರ ಚಂದಾವತ್​, ಸೂರಿ, ಗೋಪಾಲಕೃಷ್ಣ ಇದ್ದರು.