ಜಿಲ್ಲೆ

ವೈದ್ಯರ ರಕ್ಷಣೆಗೆ ಕಠಿಣ ಕಾನೂನು

ಬೀದರ್: ವೈದ್ಯರ ಮೇಲಿನ ಹಲ್ಲೆ ಘಟನೆಗಳನ್ನು ತಡೆದು ಅವರ ರಕ್ಷಣೆಗಾಗಿ ಕಠಿಣ ಕಾನೂನು ಜಾರಿಗೆ ತರಲು ಸರ್ಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ಶಾಖೆಯಿಂದ ಬ್ರಿಮ್ಸ್ ನಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿ, ಸಣ್ಣಪುಟ್ಟ ವಿಷಯಕ್ಕೆ ವೈದ್ಯರ ಮೇಲೆ ವಿವಿಧೆಡೆ ಹಲ್ಲೆ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಅಗತ್ಯವಿದೆ ಎಂದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಕೋಸ್೯ ಆರಂಭಿಸುವುದಾಗಿ ತಿಳಿಸಿದರು.
ಐಎಂಎ ಶಾಖೆ ಅಧ್ಯಕ್ಷ ಡಾ.ಮದನಾ ವೈಜಿನಾಥ ಅಧ್ಯಕ್ಷತೆ ವಹಿಸಿದ್ದರು. ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್, ಡಾ.ಮಲ್ಲಿಕಾರ್ಜುನ ಪನಶೆಟ್ಟಿ, ಡಾ.ಹೊಳಕುಂದೆ ಸುಶೀಲಾ, ಡಾ.ರಾಜೇಂದ್ರ ಜಾಧವ್, ಡಾ.ಶೀಲವಂತ, ಡಾ.ವಿಜಯಕುಮಾರ ಚಿದ್ರೆ, ಡಾ.ದಾನಪ್ಪ, ಡಾ.ಮಕ್ಸೂದ್ ಚಂದಾ, ಡಾ.ಓಂಕಾರ ಸ್ವಾಮಿ, ಡಾ.ರಾಜಶೇಖರ ಕುಲಕರ್ಣಿ, ಡಾ.ಸಿ.ಎಸ್. ಮಾಲಿಪಾಟೀಲ್, ಡಾ.ವೀರಪ್ಪ ಕೋರಿ ಇತರರಿದ್ದರು. ವೈದ್ಯರನ್ನು ಸನ್ಮಾನಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.