ರಾಯಚೂರು: ವೈದ್ಯ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಬಂಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಭಾರತೀಯ ವೈದ್ಯಕೀಯ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಮನವಿ ಸಲ್ಲಿಸಿ, ಘಟನೆಯಿಂದ ರಾಜ್ಯಾದ್ಯಂತ ವೈದ್ಯರು ಭಯಭೀತರಾಗುವಂತಾಗಿದ್ದಾರೆ. ಕೂಡಲೇ ದುಷ್ಕರ್ಮಿಗಳನ್ನು ಬಂಸಿ ವೈದ್ಯರಿಗ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಾಯಚೂರಿನಿಂದ ಮಾನ್ವಿಗೆ ತೆರಳುತ್ತಿದ್ದ ಡಾ.ಜಯಪ್ರಕಾಶ ಪಾಟೀಲ್ ಕಾರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದರೂ ಆತಂಕ ಪಡುವಂತಾಗಿದೆ. ಬೆದರಿಕೆ ಕರೆ ಬಗ್ಗೆ ವೈದ್ಯರು ಮೂರು ತಿಂಗಳ ಹಿಂದೆಯೇ ಪ್ರಕರಣ ದಾಖಲಿಸಿದ್ದರೂ ಪೊಲೀಸರು ನಿರ್ಲಕ್ಷ ತೋರಿದ್ದರಿಂದ ಈ ಘಟನೆ ಜರುಗಿದೆ.
ಜಿಲ್ಲಾ ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಬಂಸಲು ವಿಳಂಬ ಮಾಡಿದಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಜರುಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ.ಪ್ರಭುರಾಜ ಗದ್ದಿಕೇರಿ, ಉಪಾಧ್ಯಕ್ಷ ಡಾ.ಅನಿರುದ್ಧ್ ಕುಲಕರ್ಣಿ, ಪದಾಕಾರಿಗಳಾದ ಡಾ.ಹರ್ಷ ಪಾಟೀಲ್, ಡಾ.ರಾಮಪ್ಪ, ಡಾ.ವಿ.ಎ.ಮಾಲಿಪಾಟೀಲ್, ಡಾ.ನಾರಾಯಣ, ಡಾ.ನಾಗರಾಜ, ಡಾ.ಸುರೇಶ ಸಗರದ, ಡಾ.ಅಮರೇಶ ಪಾಟೀಲ್, ಡಾ.ಮನೋಹರ ಪತ್ತಾರ, ಡಾ.ಶೀಲಾ ಸಗರದ, ಡಾ.ಪ್ರಿಯಾ ಬಾಲ್ಕಿ, ಡಾ.ಶ್ರೀಲತಾ ಪಾಟೀಲ್ ಪಾಲ್ಗೊಂಡಿದ್ದರು.