ಕಲಘಟಗಿ/ಕುಂದಗೋಳ: ಸಾರ್ವಜನಿಕರು ಕರೊನಾ ನಿಯಂತ್ರಣಕ್ಕಾಗಿ ಸಹಕಾರ ನೀಡಲು ಮುಂದಾಗಬೇಕಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಕುಂದಗೋಳ ಮತ್ತು ಕಲಘಟಗಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಎಂಆರ್ಪಿಎಲ್ ಕಂಪನಿಯ ಸಹಾಯದಿಂದ 500 ಲೀಟರ್ ಉತ್ಪಾದಿಸುವ ಆಮ್ಲಜನಕ ಘಟಕಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ ತಾಲೂಕು ಆಸ್ಪತ್ರೆ ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಲ್ಲ. ಎಲ್ಲೆಡೆ ವೈದ್ಯರು ಹಾಗೂ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ, ವೈದ್ಯಕೀಯ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳ ಸದುಪಯೋಗವಾಗಬೇಕಿದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ನಿತೇಶಕುಮಾರ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಪಪಂ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಪಪಂ ಮುಖ್ಯಾಧಿಕಾರಿ ವೈ.ಎನ್. ಗದ್ದಿಗೌಡರ, ಪ್ರೊಬೇಶನರಿ ತಹಸೀಲ್ದಾರ್ ಕೆ.ಆರ್. ಪಾಟೀಲ, ಡಾ. ಬಸವರಾಜ ಬಾಸೂರ, ಡಾ.ಎನ್.ಡಿ. ಚವ್ಹಾಣ. ಸಿಪಿಐ ಪ್ರಭು ಸೂರಿನ್, ಡಾ. ನಲತವಾಡ, ಡಾ. ಬಸವರಾಜ ಹಿರೇಮಠ, ಡಾ. ಶಂಕರಗೌಡ ಹೊಸಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಸದು ಚಿಂತಾಮಣಿ, ಗಂಗಾಧರ ಗೌಳಿ, ಸಿ.ಬಿ. ಹೊನ್ನಿಹಳ್ಳಿ, ಪರಶುರಾಮ ಹುಲಿಹೊಂಡ, ದರ್ಶನ ಬನವಾಸಿ, ಸೋಮು ಕೊಪ್ಪದ ಇತರರಿದ್ದರು.
ಕುಂದಗೋಳ ಕಾರ್ಯಕ್ರಮದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್. ಐ. ಚಿಕ್ಕನಗೌಡ್ರ, ಬಿಜೆಪಿ ಮುಖಂಡ ಎಂ.ಆರ್. ಪಾಟೀಲ, ಟಿಎಚ್ಒ ಭಾಗೀರಥಿ ಮಡ್ಲೇರಿ, ಬಿಜೆಪಿ ತಾಲೂಕಾಧ್ಯಕ್ಷ ರವಿಗೌಡ ಪಾಟೀಲ, ಪಪಂ ಅಧ್ಯಕ್ಷ ವಾಸು ಗಂಗಾಯಿ ಇತರರಿದ್ದರು.
ತಾಲೂಕು ಆಡಳಿತಕ್ಕೆ ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಣೆ
ಕುಂದಗೋಳ ಜಿಎಸ್ಎಸ್ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ತೆರೆದಿರುವ ಕೋವಿಡ್ ಕೇರ್ ಸೆಂಟರ್ಗೆ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ತಾಲೂಕು ಆಡಳಿತಕ್ಕೆ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಿದರು. ಕಲಘಟಗಿ ಹನ್ನೆರಡುಮಠದ ಸಭಾಭವನದಲ್ಲಿ ಪ್ರೇರೇಪಿತ ಕ್ಷಮತಾ ಸೇವಾ ಸಂಸ್ಥೆಯಿಂದ ನೀಡಲಾದ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಕೋವಿಡ್ ಸೋಂಕಿತರ ಮನೆಯ ಬಾಗಿಲುಗಳಿಗೆ ಉಚಿತವಾಗಿ ನೀಡುವ ಕಾರ್ಯಕ್ರಮಕ್ಕೆ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.