ಜಿಲ್ಲೆ

ವೈದ್ಯಕೀಯ ಸೇವೆಯಲ್ಲಿದೆ ಸಾರ್ಥಕತೆ

ಚಿತ್ರದುರ್ಗ: ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಕಳೆದ 25 ವರ್ಷಗಳಿಂದ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುತ್ತಾ ಬಂದಿದೆ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.

ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ, ಸ್ನಾತಕ ವಿಭಾಗದಲ್ಲಿ ವಿವಿಧ ರ‌್ಯಾಂಕ್ ಪಡೆದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬುಧವಾರ ಬಸವೇಶ್ವರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಈ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ವೈದ್ಯಕೀಯ ಸೇವೆ ಸಾರ್ಥಕತೆ ತಂದುಕೊಡುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ವಿಭಾಗದ 32 ಪಿಜಿ ಪದವಿಗೆ ಅನುಮತಿ ಪಡೆಯಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್, ಕಾಲೇಜಿನ ಡೀನ್ ಡಾ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್. ರಾಜೇಶ್, ಡಾ. ರೇವತಿ ಪಟೇಲ್ ಮಾತನಾಡಿದರು. ಡಾ.ಎಂ.ಆರ್.ನಾಗೇಂದ್ರಗೌಡ ವಂದಿಸಿದರು. ಹೇಮಕ್ಕ ಮತ್ತು ಮಂಜುಳಾ ನಿರೂಪಿಸಿದರು. ಸಿದ್ಧಗಂಗಮ್ಮ, ಸುಜಾತ ಪ್ರಾರ್ಥಿಸಿದರು.

ರ‌್ಯಾಂಕ್ ವಿಜೇತರಿಗೆ ಸನ್ಮಾನ

(ಪಿಜಿ ವಿಭಾಗ)ಡಾ.ಎಂ. ಮೋನಿಕಾ(6ನೇ ರ‌್ಯಾಂಕ್, ಒಬಿಜಿ) ಡಾ.ಎಸ್.ಎ. ಮೇಘನಾ (8ನೇ, ರೆಸ್ಪಿರೇಟರಿ), ಡಾ.ಜಿ.ಆರ್. ಮಧು (9ನೇ, ಒಬಿಜಿ), ಡಾ. ಐಶ್ವರ್ಯ ಪಿ. ಜೋಗ್(10ನೇ, ಸೈಕಿಯಾಟ್ರಿ), ಡಾ. ಅಪೂರ್ವ ಆರ್. ಶಹಪುರ (9ನೇ, ಡಿವಿಎಲ್).

ಯುಜಿ ವಿಭಾಗ: ಡಾ. ಹೆಗಡೆ ಅನುಷಾ ರಘುನಾಥ್(3ನೇ, ಇಎನ್‌ಟಿ), ಡಾ.ಸಮರ್ಥ ಕುಲಕರ್ಣಿ(7ನೇ, ಫಿಜಿಯಾಲಜಿ), ಡಾ.ಎಸ್. ಚೈತ್ರಾ(8ನೇ, ಇಎನ್‌ಟಿ).