ಬಾಗಲಕೋಟೆ ನಗರದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೪-೨೫ ಸಾಲಿನ ಎಂ.ಬಿ.ಬಿ.ಎಸ್. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ ಮಾತನಾಡಿದರು.  
ಜಿಲ್ಲೆ

ವೈದ್ಯಕೀಯ ವೃತ್ತಿಗೆ ಗೌರವ ತನ್ನಿ

ಬಾಗಲಕೋಟೆ: ವೈದ್ಯಕೀಯ ಶಿಕ್ಷಣ ಎನ್ನುವುದು ಹಣ ಗಳಿಕೆ ಉದ್ದೇಶವಲ್ಲ. ಸಮಾಜ ಸೇವೆಯ ಒಂದು ಭಾಗ. ಇದನ್ನು ಅರಿತು ಮುನ್ನಡೆಯಬೇಕು. ವೃತ್ತಿಗೆ ಗೌರವ ತರುವ ಕೆಲಸ ಆಗಬೇಕು ಎಂದು ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೪-೨೫ ಸಾಲಿನ ಎಂ.ಬಿ.ಬಿ.ಎಸ್. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಕಲಿಕೆ ಹಂತದಲ್ಲಿ ಆಳವಾದ ಜ್ಞಾನ, ಪಾಂಡಿತ್ಯ ಸಾಽಸಬೇಕು. ನಮಗಿಂತ ಹೆಚ್ಚು ಜ್ಞಾನ ಹೊಂದಿದವರೊಂದಿಗೆ ಚರ್ಚೆ ನಡೆಸಬೇಕು. ಅನುಭವ ಹೊಂದಿರೊಂದಿಗೆ ವೈದ್ಯರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದರು.

ಅನೇಕ ಉದ್ದೇಶವಿಟ್ಟುಕೊಂಡು ಬಿವಿವಿ ಸಂಘದ ಸ್ಥಾಪನೆಯಾಗಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯವು ರಾಜ್ಯದ ಅತ್ಯುತ್ತಮ ವೈದ್ಯಕೀಯ ಮಹಾವಿದ್ಯಾಲಯವಾಗಿ ಬೆಳೆದು ನಿಂತಿದೆ. ಈ ಬೆಳವಣಿಗೆಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವಿಶ್ರಾಂತ ಪ್ರಯತ್ನ ಸ್ಮರಣೀಯವಾಗಿದೆ ಎಂದು ತಿಳಿಸಿದರು.

ಹಾಸ್ಟೆಲ್ ಕಮೀಟಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ, ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಇತರರು ಇದ್ದರು. ಡಾ.ಸಂಜೀವ ಕೊಳಗಿ ವಿದ್ಯಾರ್ಥಿಗಳಿಗೆ ಚರಕ ಶಪಥ ಪ್ರತಿಜ್ಞಾವಿಽ ಬೋಽಸಿದರು. ಡಾ.ನಿರಂಜನ ನಿರೂಪಿಸಿದರು. ಡಾ.ಮಂಜುಳಾ ಪಾಟೀಲ ವಂದಿಸಿದರು.