ಜಿಲ್ಲೆ

ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆಗೆ ಖಂಡನೆ

ಚಿತ್ರದುರ್ಗ: ಕೋಲ್ಕೊತ್ತದ ಮೆಡಿಕಲ್ ಕಾಲೇಜಿನಲ್ಲಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯ ಬರ್ಬರ ಹತ್ಯೆಯನ್ನು ಭಾರತೀಯ ವೈದ್ಯಕೀಯ ಸಂಘದ ಚಿತ್ರದುರ್ಗ ಶಾಖೆ ಖಂಡಿಸಿದೆ.
ಕೇರಳದ ವಿದ್ಯಾರ್ಥಿಗೆ ಚಾಕು ಇರಿತ ಘಟನೆ ಮರೆಯುವ ಮುನ್ನವೇ ಕೋಲ್ಕಾತ್ತದಲ್ಲಿ ವಿದ್ಯಾರ್ಥಿನಿ ಕೊಲೆಯಾಗಿದೆ. ಸದ್ಯ ಆರೋಪಿ ಬಂಧನವಾಗಿದೆ. ವೈದ್ಯರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಆಸ್ಪತ್ರೆ ಅಥವಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುವ ಹಿರಿಯ ಹಾಗೂ ಕಿರಿಯ ವೈದ್ಯರಿಗೆ ರಕ್ಷಣೆ ಜತೆಗೆ ಸೂಕ್ತ, ಸುಸಜ್ಜಿತ ವಿಶ್ರಾಂತಿ ಕೊಠಡಿಗಳನ್ನು ಒದಗಿಸಬೇಕು. ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸಿ, ನೊಂದ ಕುಟುಂಬ ವರ್ಗಕ್ಕೆ ನ್ಯಾಯ ಒದಗಿಸಬೇಕು. ತನಿಖೆ ವಿಳಂಬವಾದರೆ ಹಾಗೂ ವೈದ್ಯರ ರಕ್ಷಣೆಯಲ್ಲಿ ವ್ಯತ್ಯಯವಾದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ದೇಶಾದ್ಯಂತ ಪ್ರತಿಭಟಿಸಲಿದೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ.ಪಿ.ಟಿ.ವಿಜಯಕುಮಾರ್ ಹಾಗೂ ಕಾರ‌್ಯದರ್ಶಿ ಡಾ.ಕೆ.ಎಂ.ಬಸವರಾಜ್ ತಿಳಿಸಿದ್ದಾರೆ.