ಜಿಲ್ಲೆ

ವೈದ್ಯಕೀಯ ಕಾಲೇಜಿಗೆ ಸ್ಥಳವಕಾಶ ಕಲ್ಪಿಸಿ

  • ಕರುನಾಡ ವಿಜಯಸೇನೆ ಕಾರ್ಯಕರ್ತರಿಂದ ದಾವಣಗೆರೆ ವಿವಿಗೆ ಮನವಿ
    ಚಿತ್ರದುರ್ಗ: ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದು, ಪ್ರಸಕ್ತ ಸಾಲಿನಿಂದ ಶೈಕ್ಷಣಿಕ ಚಟುವಟಿಕೆ ನಡೆಸಲು ಸೂಚಿಸಿದೆ. ತಾತ್ಕಾಲಿಕವಾಗಿ 2 ವರ್ಷ ಜಿ.ಆರ್.ಹಳ್ಳಿಯ ಜ್ಞಾನಗಂಗೋತ್ರಿ ಕಾಲೇಜಿನಲ್ಲಿ ಸ್ಥಳಾವಕಾಶ ಕಲ್ಪಿಸಿಕೊಡಿ ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ದಾವಣಗೆರೆ ವಿವಿಗೆ ಸೋಮವಾರ ಮನವಿ ಸಲ್ಲಿಸಿದರು.
    ಚಿತ್ರದುರ್ಗದ ವಾಸವಿ ಮಹಲ್‌ನಲ್ಲಿ ತಾತ್ಕಾಲಿಕವಾಗಿ ಮಾಲ್‌ವೊಂದನ್ನು ತೆರೆಯಲಾಗಿದ್ದು, ತಮಿಳು ಭಾಷೆಯಲ್ಲಿ ಮುದ್ರಿತವಾಗಿರುವ ಕರಪತ್ರ ಮತ್ತು ಕೈಚೀಲ ಸಾರ್ವಜನಿಕರಿಗೆ ನೀಡುತ್ತಿರುವುದನ್ನು ಕೂಡ ವಿರೋಧಿಸಿ ಪ್ರತಿಭಟನೆ ನಡೆಸಿದರು. ಬ್ಯಾನರ್, ಬಂಟಿಂಗ್ಸ್, ಕೈಚೀಲ, ಕರಪತ್ರಗಳನ್ನು ಹರಿದು ಆಕ್ರೋಶ ಹೊರಹಾಕಿದರು.
    ಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ, ಪದಾಧಿಕಾರಿಗಳಾದ ಜಗದೀಶ್, ಅವಿನಾಶ್, ನಾಗರಾಜ್ ಮುತ್ತು, ಅಖಿಲೇಶ್, ಆರ್.ಪ್ರವೀಣ್, ಮಣಿಕಂಠ ಇತರರಿದ್ದರು.