ಮೈಸೂರು: ಗುಣಮಟ್ಟ ಹಾಗೂ ಶ್ರೇಷ್ಠತೆಯನ್ನು ತನ್ನ ಧ್ಯೇಯವನ್ನಾಗಿಸಿಕೊಂಡಿರುವ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.
ನಗರದ ಬನ್ನಿಮಂಟಪದ ಬಳಿಯ ಶಿವರಾತ್ರೀಶ್ವರನಗರದಲ್ಲಿ 2008ರಲ್ಲಿ ಸ್ಥಾಪಿತವಾದ ಅಕಾಡೆಮಿಯು ಪ್ರಾರಂಭದಿಂದಲೂ ಬೋಧನೆ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳ ಮೇಲೆ ಕೇಂದ್ರೀಕರಿಸಿದೆ. ಪ್ರಸ್ತುತ ವಿವಿಧ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಜೆಎಸ್‌ಎಸ್ ಮಹಾವಿದ್ಯಾಪೀಠದ ಭಾಗವಾಗಿದೆ. ಕ್ಯಾಂಪಸ್‌ನಲ್ಲಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜು, ಜೆಎಸ್ ದಂತ ಕಾಲೇಜು ಮತ್ತು ಆಸ್ಪತ್ರೆ ಮತ್ತು ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಇನ್ನೊಂದು ಫಾರ್ಮಸಿ ಕಾಲೇಜ್ ಅನ್ನು ಒಳಗೊಂಡಿದೆ.
ಪ್ರಸ್ತುತ ಕ್ಯಾಂಪಸ್‌ನಲ್ಲಿ 8500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೆಡಿಕಲ್ ವಿಭಾಗದಲ್ಲಿ 1500, ದಂತ ವೈದ್ಯಕೀಯ ವಿಭಾಗದಲ್ಲಿ 700, ಫಾರ್ಮಸಿ ವಿಭಾಗದಲ್ಲಿ 2000, ಸ್ಕೂಲ್ ಆಫ್ ಲೈಫ್ ಸೈನ್ಸ್ ವಿಭಾಗದಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ದೂರಶಿಕ್ಷಣಕ್ಕೂ ಇಲ್ಲಿ ಬೇಡಿಕೆ ಇದ್ದು ದೇಶ-ವಿದೇಶಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 1400ಕ್ಕೂ ಹೆಚ್ಚು ಬೋಧಕ ವರ್ಗ ಹಾಗೂ ಬೋಧಕೇತರ ವರ್ಗ ಸೇವೆ ಸಲ್ಲಿಸುತ್ತಿದ್ದಾರೆ.
ಕೋರ್ಸ್‌ಗಳು: ಮೆಡಿಕಲ್ ವಿಭಾಗದಲ್ಲಿ ಎಂಬಿಬಿಎಸ್, ಎಂಡಿ/ಎಂಎಸ್, ಎಂಸಿಎಚ್/ಡಿಎಂ, ದಂತ ವೈದ್ಯಕೀಯ ವಿಭಾಗದಲ್ಲಿ ಬಿಡಿಎಸ್, ಎಂಡಿಎಸ್, ಫಾರ್ಮಸಿ ವಿಭಾಗದಲ್ಲಿ ಡಿ-ಫಾರ್ಮ್, ಬಿ-ಫಾರ್ಮ್, ಎಂ-ಫಾರ್ಮ್ ಅಧ್ಯಯನಕ್ಕೆ ಅವಕಾಶವಿದೆ. ಸ್ಕೂಲ್ ಆಫ್ ಲೈಫ್ ಸೈನ್ಸ್ ವಿಭಾಗದಲ್ಲಿ ಯುಜಿ ಹಾಗೂ ಪಿಜಿ ಕೋರ್ಸ್‌ಗಳಿಗೆ ಬೇಡಿಕೆ ಇದೆ. ಮುಖ್ಯವಾಗಿ ಬಿಎಸ್‌ಸಿ ಬಯೋಕೆಮಿಸ್ಟ್ರಿ, ಬಿಎಸ್‌ಸಿ ಬಯೋಟೆಕ್ನಾಲಜಿ, ಬಿಎಸ್‌ಸಿ ಮೈಕ್ರೋಬಯೋಲಜಿ, ಬಿಎಸ್ ಸೈಕಾಲಜಿ ಇತ್ಯಾದಿ. ಡಿಪ್ಲೊಮಾ ಹಾಗೂ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಸೇರಿದಂತೆ ಒಟ್ಟಾರೆ 152 ಕೋರ್ಸ್‌ಗಳ ಅಧ್ಯಯನಕ್ಕೆ ಇಲ್ಲಿ ಅವಕಾಶ ಇದೆ. ನೀಟ್, ಕಾಮೆಡ್-ಕೆ ಪ್ರವೇಶಾತಿ ಪರೀಕ್ಷೆ ಬರೆದು ವಿದ್ಯಾರ್ಥಿಗಳು ಗಳಿಸಿದ ಅಂಕ ಗಳಿಕೆಗೆ ಅನುಸಾರವಾಗಿ ಸೀಟುಗಳನ್ನು ಗಿಟ್ಟಿಸಬಹುದಾಗಿದೆ.
ಗುಣಮಟ್ಟ ಹಾಗೂ ಶ್ರೇಷ್ಠತೆ ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ನಮ್ಮಲ್ಲಿ 8500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿದ್ದು, 400ಕ್ಕೂ ನುರಿತ ಬೋಧಕ ವರ್ಗ ಸೇವೆ ಸಲ್ಲಿಸುತ್ತಿದ್ದಾರೆ. 152ಕ್ಕೂ ಹೆಚ್ಚು ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಇದೆ. ಸುಸಜ್ಜಿತ ಕ್ಯಾಂಪಸ್ ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗಿದೆ.
ಡಾ.ವಿಶಾಲ್‌ಕುಮಾರ್ ಗುಪ್ತ,
ಡೀನ್, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ. ಮೈಸೂರು