ಸೊರಬ: ವೈದ್ಯ ವೃತ್ತಿಯಲ್ಲಿ ಜನರಿಗೆ ಮಾಡುವ ಸೇವೆ ನಾರಾಯಣನ ಸೇವೆಗೆ ಸಮನಾಗಿದೆ ಎಂದು ದಂತ ವೈದ್ಯ ಎಚ್.ಇ.ಜ್ಞಾನೇಶ್ ಹೇಳಿದರು.
ತಾಲೂಕು ವೈದ್ಯರ ಸಂಘ ಮತ್ತು ಕಿಡ್ನಿ ಆಸ್ಪತ್ರೆ ಶಿವಮೊಗ್ಗದ ಸಹಯೋಗದಲ್ಲಿ ಉಮಾಶಂಕರ ಸಭಾಂಗಣದಲ್ಲಿ ನಡೆದ ವೈದ್ಯರ ನಿರಂತರ ಕಲಿಕಾ ಸಭೆಯಲ್ಲಿ 50 ವರ್ಷಗಳ ಸೇವೆ ಪೂರೈಸಿದ ಹಿರಿಯ ವೈದ್ಯರಾದ ಡಾ. ಎಂ.ಕೆ.ಭಟ್, ಡಾ. ಹಾಷಮ್ ಅವರನ್ನು ಸನ್ಮಾನಿಸಿ ಮಾತನಾಡಿದರು.
50 ವರ್ಷಗಳ ಹಿಂದೆ ಜನಗಳು ಆಸ್ಪತ್ರೆಗೆ ಬರುವ ಬದಲು ಮಂತ್ರವಾದಿಗಳ ಮನೆಗೆ, ಅಂತ್ರ ಚೀಟಿ ಬರೆಯುವವರ ಮನೆಗೆ ಹೋಗುತ್ತಿದ್ದ ಕಾಲದಲ್ಲಿ ಜನಗಳಿಗೆ ಆಧುನಿಕ ವೈದ್ಯಕೀಯ ಸೇವೆಯನ್ನು ಕಡಿಮೆ ದರದಲ್ಲಿ ನೀಡಿ ತಾಲೂಕಿನ ಜನರ ಹೃದಯದಲ್ಲಿ ಇವರುಗಳು ನೆಲೆಸಿದ್ದಾರೆ. ಮುಂದೆ ಯಾರಾದರು ತಾಲೂಕಿನ ವೈದ್ಯಕೀಯ ಇತಿಹಾಸ ಬರೆಯಲು ಮುಂದಾದರೆ ಮೊದಲ ನಾಲ್ಕು ಪುಟಗಳನ್ನು ಸನ್ಮಾನಿತರಿಗೆ ಮೀಸಲಿಡಲಾಗುವುದು ಎಂದರು.
ಕಿಡ್ನಿ ತಜ್ಞ ಡಾ. ಪ್ರದೀಪ್ ಹೆಸರಿ, ಡಾ. ಪ್ರವೀಣ್, ಹೆರಿಗೆ ತಜ್ಞರಾದ ಡಾ. ಆರತಿ, ಮೂಳೆ ತಜ್ಞ ಡಾ. ಪ್ರಭು ಸಾಹುಕಾರ್, ಮಕ್ಕಳ ತಜ್ಞರಾದ ಡಾ. ನವೀನ್ ಕುಳಗದ್, ಡಾ. ಗೋಪಾಲಕೃಷ್ಣ, ಡಾ. ಮಹೇಶ್, ಡಾ. ಮಲ್ಲಿಕಾರ್ಜುನ ಮಾನೆ, ಡಾ. ನಾಗರಾಜ್, ಡಾ. ಪವಾರ್ ಡಾ. ಸತೀಶ್, ಡಾ. ನದಾಫ್, ಡಾ. ವಿನಯ್ ಇತರರಿದ್ದರು.