ನಾಗಮಂಗಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಯೋಜಿಸಿದ್ದ ನಮ್ಮ ನಡಿಗೆ ವಿಜ್ಞಾನದೆಡೆಗೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. 
ಜಿಲ್ಲೆ

ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಿ

ನಾಗಮಂಗಲ: ವಿದ್ಯಾರ್ಥಿಗಳು ಮೂಢನಂಬಿಕೆ ಹಾಗೂ ಮೌಢ್ಯತೆಗಳಿಗೆ ಒಳಗಾಗದೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ರೈತ ನಾಯಕಿ ಸುನಂದಾ ಜಯರಾಮ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ನಡಿಗೆ ವಿಜ್ಞಾನದೆಡೆಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ವೈಜ್ಞಾನಿಕತೆ, ವೈಚಾರಿಕ ಕಾಂತ್ರಿಗೆ ಮುನ್ನುಡಿ ಬರೆದವರು ರಾಷ್ಟ್ರ ಕವಿ ಕುವೆಂಪು. ವೈಚಾರಿಕತೆಯ ಮನೋಭಾವ ನಮ್ಮಲ್ಲಿ ಬಂದರೆ ಸಮಾಜ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಿ.ಬೊಮ್ಮನಹಳ್ಳಿ ವಿಜಯ್ ಕುಮಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಎನ್.ಕೆಂಪರಾಜು ಅವರು ವಿಜ್ಞಾನ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸದಸ್ಯರು ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ಮತ್ತು ವೈಜ್ಞಾನಿಕತೆ ಕುರಿತು ಸಂವಾದ ನಡೆಸಿದರು.

ಪ್ರಾಂಶುಪಾಲ ಶಿವಪ್ಪ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ತಾಲೂಕು ಘಟಕದ ಅಧ್ಯಕ್ಷ ಎನ್.ಸಿ.ಶಿವಕುಮಾರ್, ಅಣೆಚನ್ನಾಪುರ್ ಮಂಜೇಶ್, ಹಾರ್ಟ್ ಸಂಸ್ಥೆ ನಿರ್ದೇಶಕ ಡಿ.ಎನ್.ವಸಂತಕುಮಾರ್, ಉಪಪ್ರಾಂಶುಪಾಲ ಕೆ.ಎನ್.ರಮೇಶ್, ಚಿಕ್ಕರಸಿನಕೆರೆ ಶಿವಲಿಂಗಯ್ಯ, ನಿವೃತ್ತ ಪ್ರಾಂಶುಪಾಲ ಗುರುಮೂರ್ತಿ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸದಸ್ಯರು ಇದ್ದರು.