ಜಿಲ್ಲೆ

ವೈಚಾರಿಕತೆಯಿಂದ ಹಬ್ಬ ಆಚರಿಸಿ

ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ೨೭ನೇ ವರ್ಷದ ಬಸವ ಪಂಚಮಿ ನಗರದ ಮುನಿ ವೃದ್ಧಾಶ್ರಮದ ಸರ್ವೋದಯ ಸರ್ವಿಸ್ ಸಂಸ್ಥೆಯಲ್ಲಿ ಶುಕ್ರವಾರ ಆಚರಿಸಿ ವೃದ್ಧರಿಗೆ ಹಾಲು, ಉಂಡಿ ವಿತರಿಸಲಾಯಿತು.

ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರಾಜ್ಯ ವ್ಯಾಪಿ ಆ.೬ ರಿಂದ ೧೦ ರವರೆಗೆ ಹಾಲು ಕುಡಿಯುವ ಹಬ್ಬದ ಸಪ್ತಾಹ ಹಮ್ಮಕೊಳ್ಳಲಾಗಿತ್ತು. ಶ್ರೀಪೀಠದ ೨೭ ವರ್ಷಗಳಿಂದ ಬಸವ ಪಂಚಮಿ ಆಚರಿಸುತ್ತಾ ಬಂದಿದೆ ಎಂದರು.
ಭಾರತೀಯರೆಲ್ಲರು ಈ ಹಬ್ಬದಲ್ಲಿ ಕಲ್ಲಿಗೆ, ಹುತ್ತಕ್ಕೆ ಹಾಲು ಎರೆದು ವ್ಯರ್ಥವಾಗಿ ಮಣ್ಣು ಪಾಲಾಗುವುದರ ಬದಲಾಗಿ ನೆರೆ ಹೊರೆಯ ಮಕ್ಕಳಿಗೆ, ಅಂಗವಿಕಲರಿಗೆ, ಅಂಧ ಮಕ್ಕಳಿಗೆ ಇಲ್ಲವಾದರೆ ನಿಮ್ಮ ಮನೆಯ ಮಕ್ಕಳಿಗಾದರು ನೀಡಿ ಹಬ್ಬವನ್ನು ವೈಚಾರಿಕವಾಗಿ ಅರ್ಥಪೂರ್ಣವಾಗಿ ಅಚರಿಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚಮ ಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಪುರತಗೇರಿ, ಮುಖಂಡರಾದ ಶಿವಾನಂದ ಬಸರಕೊಡ, ಗೋಪಾಲ ಶಿವಪುರ ಉಪಸ್ಥಿತರಿದ್ದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ೨೭ನೇ ವರ್ಷದ ಬಸವ ಪಂಚಮಿ ಬಾಗಲಕೋಟೆ ನಗರದ ಮುನಿ ವೃದ್ಧಾಶ್ರಮದ ಸವÉÇÃðದಯ ಸರ್ವಿಸ್ ಸಂಸ್ಥೆಯಲ್ಲಿ ಶುಕ್ರವಾರ ಆಚರಿಸಿ ವೃದ್ಧರಿಗೆ ಹಾಲು, ಉಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮ ಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಪುರತಗೇರಿ, ಮುಖಂಡರಾದ ಶಿವಾನಂದ ಬಸರಕೊಡ, ಗೋಪಾಲ ಶಿವಪುರ ಉಪಸ್ಥಿತರಿದ್ದರು.