ಜಿಲ್ಲೆ

ವೈ.ಎನ್​.ಹೊಸಕೋಟೆಯ ವಿವಿಧೆಡೆ ಸರಣಿ ಕಳವು

ವೈ.ಎನ್​.ಹೊಸಕೋಟೆ: ತಡರಾತ್ರಿ ನೀಲಮ್ಮನಹಳ್ಳಿಯ ರೈತರ ಜಮೀನ್​ಗಳಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಕೊಳವೆಬಾವಿ ಕೇಬಲ್​ ಕಳುವಾಗಿವೆ. ರೈತರಾದ ರಮೇಶ್​, ರಾಮಾಂಜಿ, ಶ್ರೀನಿವಾಸ್​, ನಾಗರಾಜು, ರಾಮಾಂಜಿ, ರೋಹಿತ್​, ಶಿವಣ್ಣ ಅವರು ಸೋಮವಾರ ರಾತ್ರಿ ನೀರು ಹಾಯಿಸಿ ಮನೆಗೆ ಹೋಗಿದ್ದರು, ಮಂಗಳವಾರ ಬೆಳಗ್ಗೆ ಬಂದು ನೋಡಿದಾಗ ಕೇಬಲ್​ ಕಳುವಾಗಿವೆ. ಇದೇ ರೀತಿ ಈ ಹಿಂದೆಯೂ ಕೃಷಿ ಪರಿಕರಗಳು ಮತ್ತು ವಿದ್ಯುತ್​ ಪರಿಕರಗಳು ಕಳುವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು. ದೇಗುಲದಲ್ಲೂ ಕಳ್ಳತನ: ಬಿ.ಹೊಸಹಳ್ಳಿಯ ತಿಪ್ಪಯ್ಯನದುರ್ಗ ರಸ್ತೆಗೆ ಹೊಂದಿಕೊಂಡಿರುವ ಚೌಡ್ಲು ಮಾರಮ್ಮ ದೇವಸ್ಥಾನದಲ್ಲಿ 1 ಬೆಳ್ಳಿಯ ಖಡ್ಗ ಮತ್ತು ದೇವಿಯ ಕೊರಳಲ್ಲಿದ್ದ ಬಂಗಾರದ ಎರಡು ತಾಳಿಗಳನ್ನು ಕಳ್ಳರು ಕಟರ್​ ಬಳಿಸಿ ತುಂಡರಿಸಿ ತೆಗೆದುಕೊಂಡು ಹೋಗಿದ್ದಾರೆ. ಮರಿದಾಸನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಅಕ್ಕಮ್ಮದೇವಿ ಗುಡಿಯ ಬೀಗ ಒಡೆದು 8 ಬೆಳ್ಳಿ ಛತ್ರಿಗಳು ಒಂದು ಒಂದು ಹೊಂಬಾಳೆ ಗುಚ್ಚನ್ನು ಕಳ್ಳತನ ಮಾಡಿದ್ದಾರೆ.