ಜಿಲ್ಲೆ

ವೇಶ್ಯಾವಾಟಿಕೆ ಇಬ್ಬರು ಯುವತಿಯರ ರಕ್ಷಣೆ

ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಬೋಗಾದಿ, ಬಸವೇಶ್ವರನಗರದ ಆಶ್ರಯ ಯೋಜನೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು, ಇಬ್ಬರನ್ನು ಬಂಧಿಸಿದಲ್ಲದೆ 4 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಬಂಧಿತರು, ಗಿರಾಕಿಗಳು ಹಾಗೂ ಹುಡುಗಿಯರ ಫೋನ್ ನಂಬರ್ ಇಟ್ಟುಕೊಂಡು ಅವರಿಗೆ ಬೇಕಾದ ಸ್ಥಳಗಳಿಗೆ ಸರಬರಾಜು ಮಾಡುತ್ತಿದ್ದರೆಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಘಟಕದ ಎಸಿಪಿ ಎಸ್.ಎನ್.ಸಂದೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಎ. ಮಲ್ಲೇಶ್, ಎಸ್‌ಐ ಪ್ರತಿಭಾ ಜಂಗವಾಡ, ರಾಜು ಕೋನಕೇರಿ, ಎಎಸ್‌ಐ ಟಿ.ಸತೀಶ್, ಸಿಬ್ಬಂದಿ ಪುರುಷೋತ್ತಮ, ಮಂಜುನಾಥ್, ಅರುಣ್‌ಕುಮಾರ್, ರಘು, ಎನ್.ಜಿ.ಮಮತಾ, ಕೆ.ಜಿ.ಶ್ರೀನಿವಾಸ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.