ಸಂಗ್ರಹ ಚಿತ್ರ 
ಜಿಲ್ಲೆ

ವೇಶ್ಯವಾಟಿಕೆ: ಮೂವರ ಬಂಧನ

ಹಾಸನ: ನಗರದ ಲಾಡ್ಜನಲ್ಲ್ಲಿ ವೇಶ್ಯವಾಟಿಕೆ ನಡೆಯುತ್ತಿದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ದೊಡ್ಡಮಂಡಿಗನ ಹಳ್ಳಿಯ ಅನ್ನಪೂರ್ಣೆಶ್ವರಿ ಬೋಡಿರ್ಂಗ್ ಮತ್ತು ಲಾಡ್ಜಿಂಗ್ ಮೇಲೆ ಶುಕ್ರವಾರ ಸಂಜೆ ದಾಳಿ ನಡೆಸಿದ ಪೊಲೀಸರು ಲಾಡ್ಜನ ವ್ಯವಸ್ಥಾಪಕ ರವಿಕುಮಾರ (40), ದೇವರಾಜು (39) ಅಭಿಷೇಕ್ ಶರ್ಮ (22) ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರವಿಕುಮಾರ ಎಂಬಾತ ಲಾಡ್ಜ್ ವಹಿಸಿಕೊಂಡು ಲೈಂಗಿಕ ಚಟುವಟಿಕೆ ನಡೆಸಲು ಹೊರಗಿನಿಂದ ಮಹಿಳೆಯರನ್ನು ಕರೆಸಿ, ಗಿರಾಕಿಗಳನ್ನು ಕರೆಸಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಆಧಾರಿಸಿ ಡಿಸಿಆರ್‌ಬಿ ವಿಭಾಗದ ವಿನಯ್ ನೇತೃತ್ವದ ತಂಡ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ, ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.