ಜಿಲ್ಲೆ

ವೇಮನ ಜೀವನ ಸರ್ವರಿಗೂ ಆದರ್ಶ

ಬೀದರ್: ವೇಮನ ಅವರು ಶ್ರೇಷ್ಠ ಕವಿ. ಭೋಗ ಜೀವನದಿಂದ ಯೋಗಿ ಜೀವನಕ್ಕೆ ಮಾರ್ಪಾಡಾದ ಅವರ ತತ್ವ, ಚಿಂತನೆಗಳು ಆದರ್ಶವಾಗಿವೆ ಎಂದು ಜಿಲ್ಲಾ ರೆಡ್ಡಿ ಸಮಾಜ ಅಧ್ಯಕ್ಷ ಶಂಕರರೆಡ್ಡಿ ಚಿಟ್ಟಾ ಹೇಳಿದರು.

ನಗರದ ಅಮಲಾಪುರ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿ, ವೇಮನ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದು. ಸರ್ವರ ಹಿತ ಬಯಸಿ, ನುಡಿದಂತೆ ನಡೆದು ಬಾಳಿದ ಹೇಮರೆಡ್ಡಿ ಮಲ್ಲಮ್ಮ ಹಾಗೂ ವೇಮನ ಅವರು ರೆಡ್ಡಿ ಸಮಾಜದ ಕೀರ್ತಿಯನ್ನು ಲೋಕಕ್ಕೆ ತಿಳಿಸಿದ್ದಾರೆ. ಈ ಮಹನೀಯರು ನಮ್ಮ ಸಮಾಜದ ಅನಘ್ರ್ಯ ರತ್ನಗಳ ಎಂದರು.

ತಾಳಮಡಗಿ ಸರ್ಕಾರ ಪದವಿಪೂರ್ವ ಕಾಲೇಜಿನ ಉಪನ್ಯಾಶಕ ಡಾ.ರವೀಂದ್ರ ರೆಡ್ಡಿ ಉಪನ್ಯಾಸ ನೀಡಿ, ವೇಮನ ಅವರು ದಾರ್ಶನಿಕ ಸಾಹಿತ್ಯ ಶ್ರೀಮಂತಗೊಳಿಸಿದ ಕವಿಯಾಗಿದ್ದಾರೆ. ಸಾವಿರಾರು ಪದ್ಯ ಬರೆದಿದ್ದಾರೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಉದ್ಘಾಟಿಸಿದರು. ಈ ವೇಳೆ ಸಮಾಜದ ಗ್ರಾಪಂ ಜನಪ್ರತಿನಿಧಿಗಳು, ವಿವಿಧ ಇಲಾಖೆ ಸರ್ಕಾರಿ, ಅರೆ ಸರ್ಕಾರಿ ಬಡ್ತಿ ಹೊಂದಿದ ನೌಕರರು, ನಿವೃತ್ತ ನೌಕರರು ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. ಪ್ರಮುುಖರಾದ ಗುರುನಾಥರೆಡ್ಡಿ, ಅಶೋಕರೆಡ್ಡಿ, ವೆಂಕಟರೆಡ್ಡಿ, ಶರಣಪ್ಪ ತಿರ್ಲಾಪುರ, ರವಿರೆಡ್ಡಿ, ದತ್ತು ರೆಡ್ಡಿ, ಬಲರಾಮರೆಡ್ಡಿ, ವಿಜಯರೆಡ್ಡಿ ಇತರರಿದ್ದರು. ಗೋಪಾಲರೆಡ್ಡಿ ಸ್ವಾಗತಿಸಿದರು. ಶ್ರೀನಿವಾಸರೆಡ್ಡಿ ಮುದ್ನಾಳ ನಿರೂಪಣೆ ಮಾಡಿದರು. ಸಂಗ್ರಾಮರೆಡ್ಡಿ ವಂದಿಸಿದರು.

ಇಲ್ಲಿನ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಭವ್ಯ ಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ಹಣ ಖರ್ಚಾಗಿದ್ದು, ಇನ್ನೂ ಅನುದಾನ ಬೇಕಾಗಿದೆ. ಸಮಾಜ ಬಾಂಧವರು ಇದಕ್ಕೆ ತನು, ಮನ, ಧನದಿಂದ ಸಹಕಾರ ನೀಡಬೇಕು.| ಶಂಕರರೆಡ್ಡಿ ಚಿಟ್ಟಾಜಿಲ್ಲಾ ರೆಡ್ಡಿ ಸಮಾಜ ಅಧ್ಯಕ್ಷ