ಜಿಲ್ಲೆ

ವೇಮನ ಜಯಂತಿ 19ರಂದು

ಬೀದರ್: ನಗರದಲ್ಲಿ ಜ. 19 ರಂದು ಅರ್ಥಪೂರ್ಣವಾಗಿ ವೇಮನ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ತಿಳಿಸಿದ್ದಾರೆ.

ಜಯಂತಿ ನಿಮಿತ್ತ ಇಲ್ಲಿ ಸೋಮವಾರ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಗರದ ಗುಂಪಾ ಬಳಿ ಅಮಲಾಪುರ ರಸ್ತೆಯಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂದಿರದಲ್ಲಿ ವೇಮನ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ ರೆಡ್ಡಿ ಸಮಾಜದ ಪ್ರತಿನಿಧಿಗಳು, ಬಡ್ತಿ ಹಾಗೂ ಸೇವಾ ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಗುವುದು. ನೂತನ ಸದಸ್ಯರು ಶಿವನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕ್ ಅಥವಾ ಬ್ಯಾಂಕ್ ಅಧ್ಯಕ್ಷರಾದ ರೆಡ್ಡಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಸಂಗ್ರಾಮ ರೆಡ್ಡಿ ಹುಣಸಗೇರಿ (ಮೊ: 9035128751, 8073637536) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಸಮಾಜದ ಪ್ರಮುಖರಾದ ಸಂಗ್ರಾಮ ರೆಡ್ಡಿ ಹುಣಸಗೇರಿ, ಚಂದ್ರಶೇಖರ ರೆಡ್ಡಿ, ಗೋಪಾಲ ರೆಡ್ಡಿ, ಶರಣಪ್ಪ ರೆಡ್ಡಿ, ಸುಭಾಷ ರೆಡ್ಡಿ, ವಿಜಯಕುಮಾರ ರೆಡ್ಡಿ, ಗೋವಿಂದ ರೆಡ್ಡಿ, ಪೆಂಟಾರೆಡ್ಡಿ, ಸಂಜು ರೆಡ್ಡಿ, ಬಲವಂತ ರೆಡ್ಡಿ, ಶ್ರೀನಿವಾಸ ರೆಡ್ಡಿ, ರಾಜ ರೆಡ್ಡಿ, ಜಗನ್ನಾಥ ರೆಡ್ಡಿ, ವೆಂಕಟ ರೆಡ್ಡಿ ಇತರರಿದ್ದರು.

ಕರೊನಾ ಹಿನ್ನೆಲೆಯಲ್ಲಿ ಮೆರವಣಿಗೆ ರದ್ದುಗೊಳಿಸಲಾಗಿದೆ. ವೇಮನ ಜಯಂತಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. | ಶಂಕರ ರೆಡ್ಡಿ ಚಿಟ್ಟಾಜಿಲ್ಲಾ ರೆಡ್ಡಿ ಸಮಾಜ ಅಧ್ಯಕ್ಷ