ಕಲಬುರಗಿ: ಶ್ರೀ ಯಾಜ್ಞವಲ್ಕರು ನ್ಯಾಯಾಂಗ ಶಾಸ್ತ್ರ, ವೇದಾಂತ ಶಾಸ್ತ್ರ, ಅನೇಕ ಉಪನಿಷತ್ತು, ಗ್ರಂಥಗಳನ್ನು ನೀಡಿ ನಮ್ಮನ್ನು ಪುನೀತರನ್ನಾಗಿಸಿದ್ದಾರೆ. ವಿಶೇಷವಾಗಿ ಬೃಹದಾರಣ್ಯಕ ಉಪನಿಷತ್ತು ಹಾಗೂ ಈಶಾವಾಸ್ಯ ಉಪನಿಷತ್ತುಗಳಲ್ಲಿ ನಮ್ಮ ಜೀವನದ ಕ್ರಮ ತಿಳಿಸಿದ್ದಾರೆ. ವಿಜ್ಱಆನೇಶ್ವರರು ಯಾಜ್ಞವಲ್ಕö್ಯ ಸ್ಮÈತಿಗೆ ಬಾಷ್ಯ ಬರೆದಿದ್ದಾರೆ. ಯಾಜ್ಞವಲ್ಕö್ಯರಂತಹ ಗುರುಗಳನ್ನು ಪಡೆದ ನಾವು ಧನ್ಯರು ಎಂದು ವೇದಮೂರ್ತಿ ಆಕಾಶರಾಜಾಚಾರ್ಯ ಹೇಳಿದರು.
ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಯೋಗೀಶ್ವರ ಯಾಜ್ಞವಲ್ಕö್ಯ ಗುರುಗಳ ಜಯಂತಿಯಲ್ಲಿ ಪ್ರವಚನ ನೀಡಿ, ಯಾಜ್ಞವಲ್ಕö್ಯರು ಸ್ಮÈತಿಕಾರರು, ಉಪನಿಷತ್ಕಾರರು, ಮಹಾನ್ ಯೋಗಕಾರರು, ಶುಕ್ಲಯಜುರ್ವೇದ ಪ್ರವಕ್ತರು ಎಂದು ಬಣ್ಣಿಸಿದರು.
ಆರ್‌ಜೆ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಭುರ್ಲಿ ಪ್ರಹ್ಲಾದ ಮಾತನಾಡಿ, ಗುರುಗಳ ಜಯಂತಿಯAದು ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿರುವುದು ಸ್ತುತ್ಯಾರ್ಹ. ಗುರುಗಳ ಅನುಗ್ರಹ ಮಕ್ಕಳಿಗೆ ಸಂಪೂರ್ಣವಾಗಿ ದೊರೆಯಲಿ. ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲï ಹಾಗೂ ಟಿವಿಯಿಂದ ದೂರ ಇರಬೇಕು ಎಂದ ಸಲಹೆ ನೀಡಿದರು.
ಸಮಿತಿ ಅಧ್ಯP್ಷÀ ಮಲ್ಹಾರರಾವ ಕುಲಕರ್ಣಿ ಗಾರಂಪಳ್ಳಿ ಮಾತನಾಡಿದರು. ಕಾರ್ಯದರ್ಶಿ ರಾಘವೇಂದ್ರ ವಕೀಲ್, ಪ್ರಮುಖರಾದ ಅಪ್ಪಾರಾವ್ ಕುಲಕರ್ಣಿ ಮಂದಾರವಾಡ, ಚಂದ್ರಕಾAತ ಗದಾರ್, ರಾಮಾಚಾರ್ಯ ಅಗ್ನಿಹೋತ್ರಿ, ಶಾಮಾಚಾರ್ಯ ಬೈಚಬಾಳ್, ಅಶೋಕ ಮಳ್ಳಿ, ಭೀಮರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಭೀಮಸೇನರಾವ್ ಸಿಂಧಗೇರಿ, ತಿರುಮಲರಾವ ದೋಟಿಹಾಳ, ಪ್ರಾಣೇಶಾಚಾರ್ಯ ಬೈಚಬಾಳ್, ವಾಸುದೇವರಾವ್ ಕುಳಗೇರಿ, ಪ್ರಹ್ಲಾದ ದೇವರು, ದಯಾಘನ್ ಧಾರವಾಡಕರ್, ಶಾಮರಾವ ಕುಲಕರ್ಣಿ, ಗುಂಡೂರಾವ್ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಶ್ರೀಧರ ಕುಲಕರ್ಣಿ, ವಿನುತ ಜೋಶಿ, ಮಾರ್ಥಂಡರಾವ ಹೇಮನೂರ್, ವಾಸುದೇವರಾವ ಸಿಂಧಗೇರಿ, ಭಾರತೀಶ ಕುಲಕರ್ಣಿ, ಅಶ್ವಥ ಜೋಶಿ, ದತ್ತಾತ್ರೆಯ ಸಬ್ನವಿಸ್, ಮಂದಾರ ಸರಾಫ್, ಅವಧೂತ ಕುಲಕರ್ಣಿ ಇತರರಿದ್ದರು.