ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ೧೬೨ನೇ ವಿವೇಕಾನಂದರ ಜನ್ಮದ ಪ್ರಯುಕ್ತ ನಗರದ ಗಾಂಧಿ ಪುತ್ಥಳಿಯಿಂದ ತಾಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ ವಿಶೇಷ ಉಪನ್ಯಾಸ ನೀಡಿದರು. 
ಜಿಲ್ಲೆ

ವೇದ, ಉಪನಿಷತ್ತುಗಳ ಪರಂಪರೆ ಬೋಧಿಸಿದವರು ವಿವೇಕಾನಂದರು

ಚಿಕ್ಕಮಗಳೂರು: ರಾಷ್ಟçದ ನೆಲೆ, ಮಣ್ಣಿನ ಇತಿಹಾಸ ಹಾಗೂ ವೇದ, ಉಪನಿಷತ್ತುಗಳ ಪರಂಪರೆಯನ್ನು ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಬೋದಿಸಿ, ಸಂಸ್ಕೃತಿಯನ್ನು ಪರಿಚಯಿಸಿದವರು ವೀರ ಸನ್ಯಾಸಿ ವಿವೇಕಾನಂದರು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ ತಿಳಿಸಿದರು.

ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ೧೬೨ನೇ ವಿವೇಕಾನಂದರ ಜನ್ಮದ ಪ್ರಯುಕ್ತ ನಗರದ ಗಾಂಧಿ ಪುತ್ಥಳಿಯಿಂದ ತಾಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾ ಆರಂಭಿಸಿ ಬಳಿಕ ಸಮಾರೋಪ ಸಮಾರಂಭದಲ್ಲಿ ಶನಿವಾರ ಮುಂಜಾನೆ ಉಪನ್ಯಾಸ ನೀಡಿದರು.

ಬಾಲ್ಯದಿಂದಲೇ ವಿವೇಕಾನಂದರು ಧಾನ್ಯ, ಜ್ಞಾನ ಹಾಗೂ ಕಲಿಕೆಯಲ್ಲಿ ಬಹಳ ಮೇಧಾವಿಗಳಾಗಿದ್ದರು. ಗುರುಗಳ ಮಾರ್ಗದರ್ಶನದಿಂದ ಬದುಕನ್ನು ಮುನ್ನೆಡೆಸಿ ಪ್ರಪಂಚಕ್ಕೆ ಅತ್ಯುದ್ಬುತ ವಿಚಾರಧಾರೆಗಳನ್ನು ಬೋಧಿಸಿದ್ದರು. ಹೆಚ್ಚು ಯುವಸಮೂಹದ ಏಳಿಗೆಗೆ ಕನ್ನಡಿಯಾಗುವ ಜೊತೆಗೆ ರಾಷ್ಟçದ ಹಿತ ಚಿಂತನೆಗಾಗಿ ಬದುಕು ಮುಡಿಪಿಟ್ಟವರು ಎಂದು ಬಣ್ಣಿಸಿದರು.

ಮೂಲತಃ ಹಿಂದುತ್ವ ಅನುಯಾಯಿಯಾಗಿದ್ದ ವಿವೇಕಾನಂದರು ವಿಶ್ವ ಸರ್ವಧರ್ಮ ಸಮ್ಮೇಳನದ ಕೆಲವೇ ನಿಮಿಷಗಳ ಭಾಷಣದಲ್ಲಿ ಭಾರತÀದ ಪುರಾಣ ಇತಿಹಾಸವನ್ನು ತೆರೆದಿಟ್ಟ ಪರಿಣಾಮ ಯುರೋಪ್ ಖಂಡದ ಬಹುಬೇಡಿಕೆಯ ಪ್ರಚಾರಕರಾಗಿ ಹೊರಹೊಮ್ಮಿದ್ದರು. ಅಲ್ಲದೇ ಭಾರತದ ಸಮಗ್ರ ಇತಿಹಾಸ ಅರಿತು ಬೋಧಿಸುವಲ್ಲಿ ಪ್ರಮುಖರಾಗಿದ್ದರು ಎಂದರು.

ರಾಷ್ಟçದ ಯುವಪೀಳಿಗೆಗೆ ಹಾಗೂ ರೈತರಿಗೆ ಪ್ರೇರೇಪಿಸುವಲ್ಲಿ ವಿವೇಕಾನಂದರ ಸತತ ಪ್ರಯತ್ನವಿತ್ತು. ಪ್ರಧಾನ ಮಂತ್ರಿ ಮೋದಿ ಹಾಗೂ ಸಮಾಜಸೇವಕಿ ಮನನ್ ಚತುರ್ವೇದಿ ಸೇರಿದಂತೆ ಅನೇಕ ಪ್ರಖ್ಯಾತರು ವಿವೇಕರ ವಿಚಾರಧಾರೆ, ತತ್ವಾದರ್ಶಗಳ ಆಶಯಗಳನ್ನು ಒಪ್ಪಿ ದೇಶಸೇವೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ದೇಶದ ಯುವಸಮೂಹ ಜ್ಞಾನ, ತಂತ್ರಜ್ಞಾನದಲ್ಲಿ ಪರಿಣಿತರಾಗಿ, ನೆರೆದೇಶಕ್ಕೆ ವಲಸೆ ಹೋಗದಂತೆ ದೇಶಾಭಿಮಾನ ಮೂಡಿಸುವಲ್ಲಿ ವಿವೇಕಾನಂದರ ಚಿಂತನೆ ಬಹಳಷ್ಟಿತ್ತು. ಹೀಗಾಗಿ ಭವಿಷ್ಯದ ಪ್ರಜೆಗಳು ಕಂಕ ಣಬದ್ಧರಾಗುವ ಜೊತೆಗೆ ವಿವೇಕರ ಚರಿತ್ರೆಯನ್ನು ಅಭ್ಯಾಸಿಸುವ ಮೂಲಕ ರಾಷ್ಟçದ ಹಿತಕ್ಕಾಗಿ ಬದುಕನ್ನು ಸಮರ್ಪಿಸಬೇಕು ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕರು ತೆರಳಿದ ವೇಳೆ ಪ್ರಖ್ಯಾತಿ ಹೊಂದಿರಲಿಲ್ಲ. ರಾಷ್ಟçದ ಪುರಾತನ ಪರಂಪರೆಯನ್ನು ನೇರವಾಗಿ ಸಮ್ಮೇಳನದಲ್ಲಿ ಮಂಡಿಸಿದಾಗ ಆಕರ್ಷಿತ ವ್ಯಕ್ತಿಯಾಗಿ ರೂಪುಗೊಂಡು ಯುವಸಮೂಹಕ್ಕೆ ಚಿಲುಮೆಯ ಸ್ಪೂರ್ತಿ ಹರಡಿದ್ದರು ಎಂದರು.

ಇತ್ತೀಚಿನ ದಿನಗಳಲ್ಲಿ ಭವ್ಯ ಭಾರತದ ಕಲ್ಪನೆಯನ್ನು ದೊಂಬರಾಟ, ಬುಡಬುಡಿಕೆ ಎಂಬAತೆ ಕೆಲವು ಅಜ್ಞಾನಿಗಳು ಅಪಪ್ರಚಾರ ಮಾಡುತ್ತಿವೆ. ಇಡೀ ಪ್ರಪಂಚಕ್ಕೆ ಮತ, ಗಡಿ ಮೀರಿ ಸುಖವಾಗಿರಲಿ ಎಂಬ ಸಂದೇಶ ನೀಡಿದ ದೇಶ ನಮ್ಮದು. ವಿಜ್ಞಾನ ಅಥವಾ ತಂತ್ರಜ್ಞಾನದಲ್ಲೂ ವಿದ್ಯಾವಂತ ಯುವಕರನ್ನು ಕೊಡುಗೆ ನೀಡಿ ಬಹುದೊಡ್ಡ ಸಾಧನೆ ಮಾಡಿವೆ ಎಂದು ತಿಳಿಸಿದರು.

ವಿವೇಕವಾಣಿಯಂತೆ ನಿನ್ನ ಬಾಳಿಗೆ ನೀನೇ ಸ್ಪೂರ್ತಿ ಎಂಬ ಧ್ಯೇಯದೊಂದಿಗೆ ಸಮಾಜದಲ್ಲಿ ಪ್ರತಿಯೊಬ್ಬರು ನಿಗಧಿತ ಗುರಿ ಹೊಂದಬೇಕು. ಕಠಿಣ ಪರಿಶ್ರಮ, ಜಾಣ್ಮೆ ಹಾಗೂ ಶ್ರದ್ದೆಯಿಂದ ಗುರಿಯೆಡೆಗೆ ತಲುಪಿದರೆ ವಿವೇಕಾನಂದರ ಸಂದೇಶಕ್ಕೆ ನಿಜವಾದ ಅರ್ಥ ಮೂಡಲಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ದೇಶದ ಯುವಪೀಳಿಗೆಗೆ ಆಶಾದೀಪವಾಗಿ ಪ್ರಜ್ವಲಿಸಿದ ವಿವೇಕಾನಂದರನ್ನು ಪರಿಪಾಲಿಸುವ ಗುಣ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ೧೬೨ನೇ ಜನ್ಮದಿನದ ಅಂಗವಾಗಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ವಿವೇಕರ ಸಂಕಲ್ಪ ಎತ್ತಿಹಿಡಿಯುವ ಕೆಲಸ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್‌ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚ್ಚಿನ್, ಕಾರ್ಯದರ್ಶಿ ರಾಜೇಶ್, ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಾಧ್ಯಮ ಪ್ರಮುಖ್ ಎಚ್.ಕೆ.ಕೇಶವಮೂರ್ತಿ, ಮುಖಂಡರಾದ ಕೋಟೆ ರಂಗನಾಥ್, ಶಶಿ ಆಲ್ದೂರು, ದೀಪಕ್ ದೊಡ್ಡಯ್ಯ, ಸೀತರಾಮಭರಣ್ಯ, ಕುರು ವಂಗಿ ವೆಂಕಟೇಶ್, ಹಂಪಯ್ಯ, ಅಂಕಿತಾ ಮತ್ತಿತರರಿದ್ದರು.