ಜಿಲ್ಲೆ

ವೇತನದ ಕಡತಕ್ಕೆ ಅನುಮೋದನೆಗೆ ಅಂಗನವಾಡಿ ನೌಕರರ ಪಟ್ಟು

ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಲ್ಪನಾ,ಕಾರ್ಯದರ್ಶಿ ವಿ.ಮಂಜುಳಾ, ಖಜಾಂಚಿ ಲಕ್ಷ್ಮೀದೇವಮ್ಮ, ಮುಖಂಡರಾದ ಲೋಕೇಶ್ವರಿ,ಅಮರಾವತಿ, ಸರೋಜ, ಪ್ರಮೀಳಾ, ಸೌಭಾಗ್ಯ, ಧನಲಕ್ಷ್ಮೀ, ಗಾಯಿತ್ರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಂ.ಜಿ ಪಾಲಿ,ಸಿಡಿಪಿಒ ರಮೇಶ್ ಆಗಮಿಸಿ ಖಜಾನೆ ಅಧಿಕಾರಿಗಳೊಂದಿಗೆ ಚರ್ಚಿಸಿದರಲ್ಲದೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟರು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ,ಸರ್ಕಾರದಿಂದ ಅನುದಾನ ತಡವಾಗಿದ್ದರಿಂದ ಅಂಗನವಾಡಿ ನೌಕರರಿಗೆ ಐದು ತಿಂಗಳಿನಿಂದ ಸಕಾಲಕ್ಕೆ ವೇತನ ಆಗಿರಲಿಲ್ಲ. ಇತ್ತಿಚೆಗೆ ಅನುದಾನ ಮಂಜೂರಾಗಿದೆ. ವೇತನದ ಕಡತವನ್ನು ಜಿಲ್ಲಾ ಖಜಾನಾಧಿಕಾರಿಗಳಿಗೆ ಕಳುಹಿಸಿ ಹಲವು ದಿನಗಳು ಕಳೆದಿದ್ದರೂ ಕಡತಕ್ಕೆ ಸಹಿ ಮಾಡದೇ ವಿನಾಕಾರಣ ಮುಂದೂಡುತ್ತಿದ್ದಾರೆ. ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಡಲ್ಲ ಎನ್ನುವ ಸ್ಥಿತಿಯಲ್ಲಿ ಜಿಲ್ಲಾ ಖಜಾನೆ ಇಲಾಖೆ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ನೌಕರರ ವೇತನದ ಕಡತಕ್ಕೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿ ತಾಲೂಕು ಅಂಗನವಾಡಿ ನೌಕರರ ಸಂಘಟನೆ ನಗರದ ಜಿಲ್ಲಾ ಖಜಾನೆ ಅಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಿಜಯವಾಣಿ ಸುದ್ದಿಜಾಲ ಕೋಲಾರ