ಜಿಲ್ಲೆ

ವೇತನಕ್ಕಾಗಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಪ್ರತಿಭಟನೆ

ಕಲಬುರಗಿ: ಐದು ತಿಂಗಳಿAದ ಸಂಬಳ ನೀಡಿಲ್ಲ ಎಂದು ನಗರದ ಸಾವಿರಕ್ಕೂ ಹೆಚ್ಚಿನ ಪೌರ ಕಾರ್ಮಿಕರು, ಲೋಡರ್, ಕ್ಲೀನರ್‌ಗಳು ನಗರದ ಪಾಲಿಕೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಐದು ತಿಂಗಳ ಹಿಂದೆಯೂ ಪ್ರತಿಭಟನೆ ಮಾಡಿ, ಸಂಬಳ ಪಡೆದಿದ್ದ ಪೌರ ಕಾರ್ಮಿಕರು ಇದೀಗ ಮತ್ತೆ ಸಂಬಳ ಪಡೆಯಲು ಪ್ರತಿಭಟನೆಗೆ ಮುಂದಾಗಿದ್ದಾರೆ.

ಹಲವು ವರ್ಷದಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದರೂ ಸಂಬಳ ಪಡೆಯುವುದು ಸಾಹಸದ ಕೆಲಸವಾಗಿದೆ. ೧೫೦೦ಕ್ಕಿಂತ ಹೆಚ್ಚು ಜನ ಸೇವೆ ಸಲ್ಲಿಸುತ್ತಿದ್ದು, ಐದು ತಿಂಗಳ ವೇತನ ಬಾಕಿ ಇದೆ. ಏಪ್ರಿಲ್-೨೦೨೩ರಿಂದ ಪೌರ ಕಾರ್ಮಿಕರ ಟಿಎ, ಡಿಎ ಸೇರಿ ೧.೦೬ ಕೋಟಿ ರೂ. ಬಾಕಿ ಇದೆ. ಎರಡನ್ನೂ ಪಾವತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಆಯುಕ್ತರು ವಾರದ ರಜೆ, ಹಬ್ಬದ ರಜೆಗಳು ಒಂದು ವರ್ಷದಲ್ಲಿ ೧೦ ರಜೆಗಳು ವಿವರ ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮೌಖಿಕವಾಗಿ ತಿಳಿಸಿದ್ದಾರೆ. ಆದರೆ, ಇಲ್ಲಿವರೆಗೆ ವಿವರ ಸಲ್ಲಿಸಿಲ್ಲ. ಸಂಬಳಕ್ಕೆ ತಕ್ಕಂತೆ ಇಎಸ್‌ಐ ಹಣ ಕಡಿತ ಮಾಡುತ್ತಿದ್ದು, ಶೇ.೫೦ ಪೌರ ಕಾರ್ಮಿಕರಿಗೆ ಇಎಸ್‌ಐಸಿ ಕಾರ್ಡ್ ನೀಡಿಲ್ಲ. ೨೦೧೭ ಜನವರಿಯಿಂದ ನವೆಂಬರ್-೨೦೨೩ ರವರೆಗೆ ಭಾನುವಾರದ ರಜೆ ನೀಡದೆ ಕೆಲಸ ಮಾಡಿಸಿಕೊಂಡಿರುತ್ತಾರೆ. ಡಬಲ್ ಕೆಲಸ ಮಾಡಿದ ಸಂಬಳವೂ ನೀಡಿಲ್ಲ ಎಂದು ಹೇಳಿದರು. ಬೆಳಗ್ಗೆ ಪಾಲಿಕೆ ಬಳಿ ಜಮಾವಣೆಗೊಂಡ ಪೌರ ಕಾರ್ಮಿಕರು ನಂತರ ಜಿಲ್ಲಾಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.