ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ 
ಜಿಲ್ಲೆ

ವೇತನ ಬಿಡುಗಡೆ ಮಾಡದಿದ್ದರೆ ಅಹೋರಾತ್ರಿ ಧರಣಿ

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ತಣಿಗೆಬೈಲ್ ವಲಯದಲ್ಲಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಕುಮಾರ್ ಎಂಬುವವರಿಗೆ ಕಳೆದ ೧೦ ತಿಂಗಳಿನಿAದ ವೇತನ ನೀಡದೆ ಸತಾಯಿಸುತ್ತಿರುವ ಅರಣ್ಯಾಧಿಕಾರಿಗಳ ದೌರ್ಜನ್ಯವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಹುಲಿ ಯೋಜನೆಗೆ ಒಳಪಡುವ ತಣಿಗೆಬೈಲು ವಲಯದಲ್ಲಿ ೨೦೨೩ ರಲ್ಲಿ ಸುಮಾರು ೮೦ ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕಡಿತಲೆ ಮಾಡಲಾಗಿತ್ತು. ಈ ಸಂಬAಧ ಅರುಣ್ ಕುಮಾರ್, ಸದ್ದಾಂ ಹುಸೇನ್, ಫಾರೆಸ್ಟರ್ ಸುನಿಲ್ ಕುಮಾರ್ ಎಂಬುವವರನ್ನು ಕರ್ತವ್ಯ ಲೋಪದ ಮೇಲೆ ೨೦೨೪ರ ಜ. ೨೪ರಂದು ಅಮಾನತು ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

೨೦೨೪ರ ಜುಲೈ ೧ರಂದು ಐದು ತಿಂಗಳ ನಂತರ ಅಮಾನತನ್ನು ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗಿದ್ದು, ಅರಣ್ಯ ಆಡಳಿತಾಧಿಕಾರಿಗಳು ಈವರೆಗೆ ಅರುಣ್ ಕುಮಾರ್ ಎಂಬ ನೌಕರನಿಗೆ ವೇತನ ನೀಡದೆ ಮಾನಸಿಕವಾಗಿ ಅವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅರಣ್ಯ ಇಲಾಖೆಯ ಸಿಸಿಎಫ್ ಮತ್ತು ಡಿಎಫ್‌ಓಗಳು ಈ ಪ್ರಕರಣದ ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಈ ಮೂವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಸಂಘಟನೆಗೆ ಬಂದ ದೂರಿನನ್ವಯ ಅರಣ್ಯಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಅರುಣ್ ಕುಮಾರ್ ಖಾಲಿ ಪತ್ರಕ್ಕೆ ಸಹಿ ಹಾಕಿಕೊಡಲಿಲ್ಲ. ಅಧಿಕಾರಿಗಳು ಹೇಳಿದಂತೆ ನಡೆದುಕೊಂಡು ಹೇಳಿಕೆ ನೀಡಲಿಲ್ಲ ಎಂಬ ಕಾರಣಕ್ಕೆ ಕಳೆದ ೧೦ ತಿಂಗಳಿAದ ವೇತನ ನೀಡದೆ ತೊಂದರೆ ನೀಡುತ್ತಿದ್ದಾರೆ. ಕಡಿತಲೆಯಾಗಿರುವ ೮೦ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಎಲ್ಲಿಗೆ ಸಾಗಿಸಲಾಯಿತು ಎಂಬುದು ಬಹಿರಂಗೊAಡಿದೆ ಎಂದರು.

ಕೂಡಲೇ ಈ ನೌಕರನಿಗೆ ವೇತನವನ್ನು ಬಿಡುಗಡೆಮಾಡಿ ಅವರ ಕುಟುಂಬಕ್ಕೆ ಸ್ಪಂದಿಸದಿದ್ದರೆ ಏ.೨೯ ರಂದು ಅರಣ್ಯ ಇಲಾಖೆಯ ಎದುರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಬರುವ ಯಾವುದೇ ಸಚಿವರನ್ನು ಪ್ರಶ್ನಿಸುವುದಾಗಿ ಎಚ್ಚರಿಸಿದರು.

ಈ ಪ್ರತಿಭಟನೆಗೆ ಪ್ರಗತಿಪರ ಸಂಘಟನೆಗಳು, ದಲಿತ ಪರ ಹೋರಾಟಗಾರರು ಬೆಂಬಲಿಸಬೇಕೆAದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅರುಣ್ ಕುಮಾರ್ ತಾಯಿ ಗಂಗಮ್ಮ, ಪತ್ನಿ ಅರ್ಚನ, ಪ್ರಮುಖರಾದ ಪುಟ್ಟಸ್ವಾಮಿ, ವಿರೂಪಾಕ್ಷ ಮತ್ತಿತರರು ಉಪಸ್ಥಿತರಿದ್ದರು.