ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರಿಗೆ ಸರ್ಕಾರಿ ನೌಕರರ ಸಂದ ಸದಸ್ಯರು ಮನವಿ ಸಲ್ಲಿಸಿದರು. ಐ.ವೆ. ಪವಾಡಿಗೌಡರ, ಬಿ.ಬಿ. ಹರನಟ್ಟಿ, ಶಿವು ಗೊರವನಕೊಳ್ಳ, ಸುರೇಶ ಏಣಿ ಇತರರಿದ್ದರು. 
ಜಿಲ್ಲೆ

ವೇತನ ಆಯೋಗದ ವರದಿ ಜಾರಿಗೊಳಿಸಲಿ

ಸೋಮಲಿಂಗ ತಳವಾರ

ರಾಮದುರ್ಗ: ಯಥಾವತ್ತಾಗಿ 7ನೇ ವೇತನ ಆಯೋಗದ ವರದಿ ಜಾರಿ ಸೇರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕು ಟಕದ ಪದಾಧಿಕಾರಿಗಳು ಶಾಸಕ ಅಶೋಕ ಪಟ್ಟಣ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ರ್ನಿಣಯದಂತೆ ಎನ್​ಪಿಎಸ್​ ರದ್ದುಪಡಿಸಿ ಒಪಿಎಸ್​ ಮರು ಜಾರಿ ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಶಾಸಕರ ಗಹ ಕಚೇರಿಯಲ್ಲಿ ನೌಕರ ಸಂದ ಸದಸ್ಯರು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅಶೋಕ ಪಟ್ಟಣ, ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಸೆಳೆದು ನೌಕರ ಸಂದ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ನೌಕರರ ಸಂದ ತಾಲೂಕಾಧ್ಯ ಐ.ವೆ. ಪವಾಡಿಗೌಡರ, ಖಜಾಂಚಿ ಬಿ.ಬಿ. ಹರನಟ್ಟಿ, ಪ್ರಾಥಮಿಕ ಶಾಲಾ ಶಿಕರ ಸಂದ ಅಧ್ಯ ಎಂ.ಎಸ್​. ನಿಜಗುಲಿ, ಗ್ರಾಮ ಲೆಕ್ಕಾಧಿಕಾರಿ ಸಂದ ಅಧ್ಯ ಶಿವು ಗೊರವನಕೊಳ್ಳ, ಪ್ರೌಢಶಾಲಾ ಶಿಕರ ಸಂದ ಸುರೇಶ ಏಣಿ, ಅಶೋಕ ಹಕಾಟಿ, ಸುರೇಶ ಹುಚ್ಚನ್ನವರ, ಮಾರುತಿ ಜಂಗವಾಡ, ಶಿವು ಯರಗುದ್ರಿ ಇತರರಿದ್ದರು.