?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ವೇಗದ ಮಿತಿಯಲ್ಲಿ ವಾಹನ ಚಲಾಯಿಸಿ

ಭಾಲ್ಕಿ: ಚಾಲಕರು ಶಾಲಾ ವಾಹನಗಳನ್ನು ವೇಗದ ಮಿತಿಯಲ್ಲಿ ಚಲಾಯಿಸಿ ಅಪಘಾತಗಳನ್ನು ನಿಯಂತ್ರಿಸಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹ್ಮದ್ ಜಾಫರ್ ಸಾದಿಕ್ ಹೇಳಿದರು.
ಪಟ್ಟಣದ ಡೈಮಂಡ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾರಿಗೆ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಮಾತನಾಡಿ, ದೇಶದ ಭವಿಷ್ಯವಾದ ಮಕ್ಕಳ ಜೀವ ಚಾಲಕರ ಕೈಯಲ್ಲಿರುತ್ತದೆ. ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ಚಾಲಕರ ಮೇಲಿದೆ ಎಂದರು.
ವಾಹನ ಚಾಲನೆ ವೇಗದ ಮಿತಿಯಲ್ಲಿ ಇರಬೇಕು. ನಗರ ಪ್ರದೇಶದಲ್ಲಿ ೪೦ ಮತ್ತು ಹೊರಗಡೆ ಪ್ರತಿ ಗಂಟೆಗೆ ೬೦ ಕಿ.ಮೀ. ವೇಗ ದಾಟದಂತೆ ಎಚ್ಚರ ವಹಿಸಬೇಕು. ವಾಹನಗಳನ್ನು ರಸ್ತೆಯ ಬಲ ಬದಿಯಲ್ಲಿ ಓಡಿಸಬೇಕು. ಇದರಿಂದ ಶೇ.೯೦ ಅಪಘಾತ ತಡೆಯಲು ಸಾಧ್ಯ ಎಂದರು.
ನಗರ ಪೊಲೀಸ್ ಠಾಣೆ ಸಿಪಿಐ ಅಂಬರೀಶ ಮಾತನಾಡಿ, ಮನುಷ್ಯನ ಜೀವನ ಅಮೂಲ್ಯವಾದದ್ದು, ಅಜಾಗರೂಕತೆಯಿಂದ ಜೀವಕ್ಕೆ ಕಂಟಕ ತಂದುಕೊಳ್ಳಬಾರದು. ಚಾಲಕರು ಸೇರಿ ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ರಸ್ತೆ ನಿಯಮ ಪಾಲಿಸಬೇಕು. ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಡಬಾರದು. ವಾಹನಗಳನ್ನು ರಸ್ತೆಗಿಳಿಸುವ ಮೊದಲು ಸುರಕ್ಷತೆ ಪರಿಶೀಲಿಸಬೇಕು. ಕಡ್ಡಾಯವಾಗಿ ಲೈಸೆನ್ಸ್, ವಿಮೆ ಮಾಡಿಸಬೇಕು ಎಂದರು.
ಡೈಮAಡ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಸ್ತಾನ ವಲಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಸಂಪಾದಕರ ಸಂಘದ ಅಧ್ಯಕ್ಷ ಇಂದ್ರಜೀತ ಪಂಚಾಳ, ಕರವೇ ಅಧ್ಯಕ್ಷ ಗಣೇಶ ಪಾಟೀಲ್, ಪತ್ರಕರ್ತ ವಿಜಯಕುಮಾರ ಪರ್ಮಾ, ಆರ್‌ಟಿಒ ಅಧೀಕ್ಷಕ ಮಹಾದೇವ, ಸಂಸ್ಥೆ ಆಡಳಿತಾಧಿಕಾರಿ ಅಶ್ವಿನ ಭೋಸ್ಲೆ ಇತರರಿದ್ದರು. ಭೀಮರಾವ ಕರ್ಣ ನಿರೂಪಣೆ ಮಾಡಿದರು.