ಕಂಪ್ಲಿ: ಪಟ್ಟಣದ ಹೊರವಲಯದ ರಸ್ತೆಗಳಲ್ಲಿ ಅಪಘಾತ ತಡೆಯಲು ಸೂಚನಾ ಫಲಕ, ವೇಗ ನಿಯಂತ್ರಕ ಹಾಕಿಸುವಂತೆ ಆಗ್ರಹಿಸಿ ಇನ್‌ಸ್ಪೆಕ್ಟರ್ ಕೆ.ಬಿ.ವಾಸುಕುಮಾರ್ ಅವರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ್ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಪಟ್ಟಣದ ವಾಲ್ಮೀಕಿ ವೃತ್ತದಿಂದ ಕಣವಿ ತಿಮ್ಮಲಾಪುರ ರಸ್ತೆ (ಸಿದ್ದೇಶ್ವರ ಕ್ರಾಸ್) ತನಕ ಹೊಸ ರಸ್ತೆ ನಿರ್ಮಿಸಿರುವುದರಿಂದ ವಾಹನಗಳು ಅತಿವೇಗದಿಂದ ಚಲಿಸುತ್ತಿದ್ದು, ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಅಪಘಾತ ತಡೆಯಲು ತಿರುವುಗಳಲ್ಲಿ ಸೂಚನಾಫಲಕ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಪಟ್ಟಣದ ವಾಲ್ಮೀಕಿ ವೃತ್ತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಕ್ಕರೆ ಕಾರ್ಖಾನೆ ರಸ್ತೆ, ನಂ.10ಮುದ್ದಾಪುರ ಕ್ರಾಸ್ ರಸ್ತೆ, ನಂ.10ಮುದ್ದಾಪುರ ಗ್ರಾಪಂ.ಕಚೇರಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಪ್ರಜಾಸೌಧ, ಗೌರಮ್ಮನ ಕೆರೆ ರಸ್ತೆ, ಬಳ್ಳಾರಿ ಕ್ರಾಸ್, ಕಣವಿ ತಿಮ್ಮಲಾಪುರ ಕ್ರಾಸ್ ಮಾರ್ಗದಲ್ಲಿ ವೇಗ ನಿಯಂತ್ರಕ ಅಳವಡಿಸಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.