ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ-2, ಜಿಲ್ಲೆಯಲ್ಲಿ ಜೂ.14ರಿಂದ 22ರ ವರೆಗೆ ಸುಗಮವಾಗಿ ನಡೆಯಿತು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ನಾಸಿರುದ್ದೀನ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 19 ಪರೀಕ್ಷಾ ಕೇಂದ್ರಗಳಿದ್ದವು. ಪ್ರಥಮ ಭಾಷೆ-3090, ದ್ವಿತೀಯ-3813, ತೃತೀಯ-4184, ಗಣಿತ-4965, ವಿಜ್ಞಾನ-4710, ಸಮಾಜ ವಿಜ್ಞಾನ-2941 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಜಿಲ್ಲಾ ನೋಡಲ್‌ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ವೆಬ್‌ಕಾಸ್ಟ್ ಉಸ್ತುವಾರಿ ವಿಶಾಲಾ, ಡಿಡಿಪಿಐ ಕಚೇರಿಯ ಎಚ್.ಗೋವಿಂದಪ್ಪ, ಎಸ್.ಟಿ.ಸವಿತಾ, ಎಸ್.ಸಿ.ಪ್ರಸಾದ್, ಪೂರ್ಣಿಮಾ, ಎಚ್.ಗಿರಿಜಾ, ಸಿ.ಎಸ್.ಲೀಲಾವತಿ, ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ಚಂದ್ರಣ್ಣ, ಶಿವಣ್ಣ, ರೇವಣ್ಣ, ಶ್ರೀನಿವಾಸ್, ತಿಪ್ಪೇರುದ್ರಪ್ಪ, ಬಸವರಾಜ್ ಓಲೇಕಾರ್, ಸಮೀರಾ, ಮಮ್ತಾಜ್, ಲಲಿತಮ್ಮ, ಕಿರಣ್ಮಯಿ, ಲೋಕೇಶ್ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.