ಜಿಲ್ಲೆ

ವೆಂಕಟೇಶ್ವರರಾವ್‌ಗೆ ಇಡಿ ನೋಟಿಸ್

ಬಳ್ಳಾರಿ : ತಾಲೂಕಿನ ಕೃಷ್ಣಾನಗರ ಕ್ಯಾಂಪ್ ನಿವಾಸಿ ವೆಂಕಟೇಶ್ವರರಾವ್‌ಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಈಗಗಾಲೇ ಬಂಧನದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ಅಪ್ತ ನೆಕ್ಕಂಟಿ ನಾಗರಾಜ್ ಸೋದರ ಮಾವ ಕೂಡಯಾಗಿದ್ದಾರೆ. ಜಿಲ್ಲೆಯ ತಮ್ಮ ಕುಟುಂಬದ ಸದಸ್ಯರು ಹಾಗೂ ಅಪ್ತರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಹಿನ್ನಲೆ ನೋಟಿಸ್ ನೀಡಲಾಗಿದೆ. ಜಿಲ್ಲೆಗೆ ಭೇಟಿ ನೀಡಿದ್ದ ಇಡಿ ಅಧಿಕಾರಿಗಳು, ವೆಂಕಟೇಶ್ವರರಾವ್ ಅವರ ಸೇರಿದಂತೆ ಕೃಷ್ಣನಗರ ಕ್ಯಾಂಪ್, ಮಿಂಚೇರಿ ಕ್ಯಾಂಪ್ ಹಾಗೂ ಭಾಗ್ಯನಗರ ಕ್ಯಾಂಪ್‌ನ ಹಲವರಿಗೆ ನೋಟಿಸ್ ನೀಡಲಾಗಿದೆ ಎಂದು ಅಪ್ತ ಮೂಲಗಳು ತಿಳಿಸಿದವು.