ಕನಕಗಿರಿ ಪಟ್ಟಣದ ಐತಿಹಾಸಿಕ ವೆಂಕಟಾಪತಿ ಬಾವಿಯನ್ನು ಪಪಂ ಸಿಬ್ಬಂದಿ ಗುರುವಾರ ಸ್ವಚ್ಛಗೊಳಿಸಿದರು. 
ಜಿಲ್ಲೆ

ವೆಂಕಟಾಪತಿ ಬಾವಿ ಸ್ವಚ್ಛಗೊಳಿಸಿದ ಪಪಂ

district koppal tank cleening in kanakagiri town koppal

ಕೊಪ್ಪಳ (ಕನಕಗಿರಿ) : ಪಟ್ಟಣದ ಐತಿಹಾಸಿಕ ಪ್ರಸಿದ್ಧ ವೆಂಕಟಾಪತಿ ಬಾವಿಯನ್ನು ಪಪಂ ಸಿಬ್ಬಂದಿ ಗುರುವಾರ ಸ್ವಚ್ಛಗೊಳಿಸಿದರು.

ಬಾವಿ ರ್ನಿಲಕ್ಷ$್ಯಕ್ಕೆ ಒಳಗಾಗಿದೆ. ಕುಡುಕರು ಮದ್ಯದ ಬಾಟಲ್​, ನೀರಿನ ಪೌಚ್​ ಎಸೆದು ಅಂದಗೆಡುವಂತೆ ಮಾಡುತ್ತಿದ್ದಾರೆ. ಆಗಾಗ ಪಪಂನಿಂದ ಸ್ವಚ್ಛತಾ ಕಾರ್ಯ ನಡೆದರೂ ನಿರಂತರ ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ. ಸ್ಮಾರಕ ವೀಕ್ಷಣೆಗೆ ಬರುವ ಜನರು ಮುಜುಗರ ಅನುಭವಿಸುವಂತಾಗಿದೆ. ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಗಳ ಆಳ್ವಿಕೆಯಲ್ಲಿ ನಿಮಾರ್ಣಗೊಂಡ ಬಾವಿ ಬಗ್ಗೆ ಮಾಹಿತಿ ಲಕಗಳಿಲ್ಲ. ಅಳವಡಿಸಿದಲ್ಲಿ ಜನರಿಗೆ ಮಾಹಿತಿ ದೊರೆಯಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಜತೆಗೆ ನಿರಂತರ ಸ್ವಚ್ಛತೆ ಜತೆಗೆ ಅಗತ್ಯ ಭದ್ರತೆ ಕಲ್ಪಿಸುವಂತೆ ಬೇಡಿಕೆಯೂ ಇದೆ.