ಜಿಲ್ಲೆ

ವೆಂಕಟಯ್ಯನಛತ್ರ ಕ್ಲಬ್ ತಂಡಕ್ಕೆ ಪ್ರಥಮ ಬಹುಮಾನ

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಸರ್ಕಾರಿ ಪ್ರೌಢಶಾಲೆ ಚಾಮರಾಜನಗರ ಜಿಲ್ಲಾ ಖೊ-ಖೊ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಇದೇ ಗ್ರಾಮದ ್ರೆಂಡ್ಸ್ ಕ್ಲಬ್ ತಂಡ ಪ್ರಥಮ ಬಹುಮಾ ಗೆದ್ದಿದೆ.

ಭಾನುವಾರ ರಾತ್ರಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಪುರುಷರ ವಿಭಾಗದಲ್ಲಿ ವೆಂಕಟಯ್ಯನ ಛತ್ರ ್ರೆಂಡ್ಸ್ ಕ್ಲಬ್ ಪ್ರಥಮ (10 ಸಾವಿರ ರೂ.ನಗದು ಮತ್ತು ಟ್ರೋಫಿ), ಕೊಳ್ಳೇಗಾಲ ತಂಡ ದ್ವಿತೀಯ (6 ಸಾವಿರ ರೂ. ಮತ್ತು ಪ್ರಶಸ್ತಿ), ವೆಂಕಟಯ್ಯನಛತ್ರ ಸರ್ಕಾರಿ ಪ್ರೌಢಶಾಲೆ ತೃತೀಯ (4 ಸಾವಿರ ರೂ. ಮತ್ತು ಪ್ರಶಸ್ತಿ), ದೊಡ್ಡಿಂದುವಾಡಿ ತಂಡ ನಾಲ್ಕನೇ ಸ್ಥಾನ (3 ಸಾವಿರ ರೂ. ಮತ್ತು ಪ್ರಶಸ್ತಿ)ಗಳಿಸಿತು. 14ವರ್ಷ ವರ್ಷದೊಳಗಿನ ವಿಭಾಗದಲ್ಲಿ ಸಿದ್ದಯ್ಯನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ರಥಮ), ಬಸವಾಪುರ (ದ್ವಿತೀಯ) ಸ್ಥಾನ ಪಡೆಯಿತು.

ಸಂಸ್ಥೆ ಅಧ್ಯಕ್ಷ ಎಚ್.ಬಿ.ಶಮಿತ್‌ಕುಮಾರ್, ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ತರಬೇತುದಾರ ಎಂ.ನಟರಾಜು, ಸೋಮಣ್ಣ, ಗ್ರಾ.ಪಂ ಉಪಾಧ್ಯಕ್ಷ ಕೃಷ್ಣಮೂರ್ತಿ, ಚಂದು, ರಾಘವೇಂದ್ರ, ನಟರಾಜು, ರಾಜು ಹೊಸೂರು ಮತ್ತು ಇತರರು ಹಾಜರಿದ್ದರು.