ಚಾಮರಾಜನಗರ: ಗ್ರಾಮಾಂತರ ವ್ಯಾಪ್ತಿಯಲ್ಲಿ ಕರೊನಾ ವೈರಸ್ ರೋಗವನ್ನು ತಡೆಗಟ್ಟಲು ವೆಂಕಟಯ್ಯನಛತ್ರ ಗ್ರಾಮ ಪಂಚಾಯತಿ ವ್ಯಾಪ್ತಿಗಯಲ್ಲಿ ಗ್ರಾಪಂ ಅಧ್ಯಕ್ಷ ಸೋಮಣ್ಣ ಅವರ ನೇತೃತ್ವದಲ್ಲಿ ಸ್ಯಾನಿಟ್ರೈಜರ್, ಹೈಪೋ ಕ್ಲೋರೈಡ್ ಸಿಂಪಡನೆ ಮಾಡಲಾಯಿತು.
ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್, ಬ್ಯಾಂಕ್ ಆಫ್ ಬರೋಡ, ಸರ್ಕಾರಿ ಆಸ್ಪತ್ರೆ, ಗ್ರಾಮ ಪಂಚಾಯತಿ ಸೇರಿದಂತೆ ಜನಸಂದಣಿ ಇರುವ ಸ್ಥಳಗಳು, ವಾಸದ ಮನೆಗಳು, ಅಂಗಡಿ ಮುಂಗಟ್ಟುಗಳು, ತಿಪ್ಪೆಗುಂಡಿಗಳು ಇರುವಲ್ಲಿ ಹೈಪೋ ಕ್ಲೋರೈಡ್ ಸಿಂಪಡಣೆ ಮಾಡಲಾಯಿತು. ಈ ವೇಳೆ ವೆಂಕಟಯ್ಯನ ಛತ್ರದ ಪ್ರಾಥಮಿಕ ಆಸ್ಪತ್ರೆಯ ವೈದ್ಯ ಡಾ.ಗೋವಿಂದ ರಾಜು, ಪಿಡಿಓ ಮಹೇಶ್, ಆರ್.ಐ.ನಾಗರಾಜ್, ತಾಲ್ಲೂಕು ಗ್ರಾಮ ಸಹಾಯಕರ ಅದ್ಯಕ್ಷ ನಾರಾಯಣ ಸ್ವಾಮಿ, ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.