ಜಿಲ್ಲೆ

ವೃದ್ಧೆಯ ಸರ ಕಸಿದು ಪರಾರಿ

ಮೈಸೂರು: ಸಿದ್ಧಾರ್ಥನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎನ್.ಎಸ್.ರತ್ನಾ(63) ಎಂಬುವರ ಚಿನ್ನದ ಸರವನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದಾರೆ.


ಸ್ನೇಹಿತೆ ಮನೆಯಿಂದ ಭಾನುವಾರ ಸಂಜೆ 7ರ ಸುಮಾರಿನಲ್ಲಿ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಯುವಕರು ಬೈಕ್ ನಿಲ್ಲಿಸಿಕೊಂಡಿದ್ದು,

ಇವರಲ್ಲಿ ಒಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ರತ್ನಾ ಅವರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಆತ ಹಿಂಭಾಗದಿಂದ ಬಂದು ಏಕಾಏಕಿ 80 ಗ್ರಾಂ ಸರ ಕಿತ್ತುಕೊಂಡು ನಂತರ ಇಬ್ಬರೂ ಪರಾರಿಯಾಗಿದ್ದಾರೆ. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.