ಜಿಲ್ಲೆ

ವೃದ್ಧೆ ಮೇಲೆ ಹಲ್ಲೆ ನಡೆಸಿ ಸರ ಕಳವು


ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯಲ್ಲಿ ಸೋಮವಾರ ರಾತ್ರಿ ವೈದ್ಯರ ಬಳಿಗೆ ತೆರಳುತ್ತಿದ್ದ ವೃದ್ಧೆಯ ಮೇಲೆ ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.


ಬಡಾವಣೆಯ 2ನೇ ಕ್ರಾಸ್‌ನ ನಿವಾಸಿ ವಿ.ಕೆ. ಗಿರೀಶ್ ಅವರ ಅತ್ತೆ ಪುಟ್ಟತಾಯಮ್ಮ ಅವರ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಮಾಂಗಲ್ಯ ಸರದ ಕಳವಿಗೆ ಯತ್ನಿಸಿದ್ದು, ಸುಮಾರು 20 ಗ್ರಾಂ ಸರವನ್ನು ಕಿತ್ತೊಯ್ದಿದ್ದಾನೆ. ಆಘಾತಕ್ಕೊಳಗಾಗಿದ್ದ ಪುಟ್ಟತಾಯಮ್ಮ ಅವರಿಗೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಈ ಸಂಬಂಧ ವಿ.ಕೆ.ಗಿರೀಶ್ ದೂರಿನ ಆಧಾರ ಮೇಲೆ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.