ಜಿಲ್ಲೆ

ವೃದ್ಧಾಶ್ರಮ ಸಂಖ್ಯೆ ಕಡಿಮೆಯಾಗಲಿ

ಬಾಗೇಪಲ್ಲಿ : ಮುಂಬರುವ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಮಾಡುವಂತಹ ಸಂಪ್ರದಾಯವನ್ನು ಯುವಪೀಳಿಗೆ ಬೆಳಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ತಾಲೂಕಿನ ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನದಲ್ಲಿ ಡಾ.ಜಚನಿ ರಾಷ್ಟ್ರೀಯ ಸೇವಾ ಪೀಠದಿಂದ ಶುಕ್ರವಾರ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.ನಿಡುಮಾಮಿಡಿ ಮಹಾಸಂಸ್ಥಾನದಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಗ್ರಾಮೀಣ ಬಡಜನತೆಗೆ ಶಿಕ್ಷಣ, ವೃದ್ಧಾಶ್ರಮ , ಅನ್ನದಾನ, ವಸತಿ ಹಾಗೂ ಆರೋಗ್ಯ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯವಾಗಿದ್ದು, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ನಿಡುಮಾಮಿಡಿ ಮಹಸಂಸ್ಥಾನದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲದೇಶಿಕೇಂದ್ರ ಸ್ವಾಮಿ ಮಾತನಾಡಿ, ಸಾರ್ವಜನಿಕ ವ್ಯವಸ್ಥೆಯಲ್ಲಿ ಜನಪರ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ತಹಸೀಲ್ದಾರ್ ಎಂ.ನಾಗರಾಜು, ಕಂದಾಯ ವೃತ್ತ ನಿರೀಕ್ಷಕ ರಮೇಶ್, ಸತ್ಯ ಸಾಯಿ ಧರ್ಮಶಾಲಾ ಅಧ್ಯಕ್ಷ ಕೆ.ಎಂ.ನಾಗರಾಜು, ಎಬಿವಿಪಿ ಮಂಜುನಾಥರೆಡ್ಡಿ ಇತರರಿದ್ದರು.