ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವೃದ್ಧ ಮತ್ತು ಅನಾಥ ಮಕ್ಕಳ ಸೇವೆ ಮಾಡುವುದೇ ಪುಣ್ಯದ ಕೆಲಸವಾಗಿದೆ ಎಂದು ಹೆಗ್ಗವಾಡಿ ಮಠದ ಶ್ರೀರಾಜಶೇಖರ ಸ್ವಾಮೀಜಿ ಹೇಳಿದರು.
ತಾಲೂಕಿನ ಉತ್ತುವಳ್ಳಿ ಸಮೀಪದಲ್ಲಿರುವ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್‌ನ 3 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಜನ್ಮದಿನಾಚರಣೆಯನ್ನು ಸರಳವಾಗಿ ವೃದ್ಧರು ಮತ್ತು ಅನಾಥಾಶ್ರಮದಲ್ಲಿ ಆಚರಣೆ ಮಾಡಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ವೃದ್ಧರನ್ನು ಮಕ್ಕಳು ನೋಡಿಕೊಳ್ಳದೆ ಮನೆಗಳಿಂದ ಹೊರಹಾಕುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೃದ್ಧರಿಗೆ ಸೇವೆ ಮಾಡುವುದೇ ಪುಣ್ಯದ ಕೆಲಸವಾಗಿದೆ.
ಕಾರ್ಯಕ್ರಮದಲ್ಲಿ ಕುರುಬೂರು ಮಠದ ಶ್ರೀಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ, ಆಲಹಳ್ಳಿ ಪಟ್ಟದ ಮಠಾಧ್ಯಕ್ಷ ಶಿವಲಿಂಗ ಸ್ವಾಮಿ, ಪ್ರಾಚಾರ್ಯ ಪ್ರದೀಪ್ ಕುಮಾರ್ ದೀಕ್ಷಿತ್, ನಿವೃತ್ತ ಉಪನ್ಯಾಸಕ ಹರವೆ ನಾಗಮಲ್ಲಪ್ಪ, ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಪ್ರಭು, ಮಂಜುನಾಥ್ ವಿಶ್ವಕರ್ಮ, ಸದಸ್ಯರಾದ ಮಹದೇವಪ್ಪ, ಚಂದ್ರು ಲಕ್ಕೂರು, ಗಾಯಿತ್ರಿ, ಸಿದ್ದಪ್ಪಾಜಿ ಹಾಜರಿದ್ದರು.