ಜಿಲ್ಲೆ

ವೃದ್ಧರ ಪಿಂಚಣಿ ಹಣ ಗುಳುಂ: ಚಿಮ್ಮಇದಲಾಯಿ ಗ್ರಾಮದಲ್ಲಿ ರಸ್ತೆ ತಡೆ

ಚಿಂಚೋಳಿ: ತಾಲೂಕಿನ ಚಿಮ್ಮಇದಲಾಯಿ ಗ್ರಾಮದಲ್ಲಿ ದಲಿತ ಸೇನೆಯು ವಿವಿಧ ಬೇಡಿಕೆಗಳ ಈಡೇರಿಕೆಗೆ ರಸ್ತಾರೋಕೋ ಚಳುವಳಿ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಎಸಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಯೋಗಿ ರುಸ್ತಂಪೂರ ಮಾತನಾಡಿ, ಚಿಮ್ಮಇದಲಾಯಿ ಗ್ರಾಮದ ಅಂಚೆ ಕಚೇರಿಯಲ್ಲಿ ಗ್ರಾಮದ ವಯೋ ವೃದ್ಧರ, ಜನರ ಖಾತೆಯಿಂದ ಹಣ ಲೂಟಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಣ ಜನರಿಗೆ ಕಲ್ಪಿಸುವಂತೆ ಒತ್ತಾಯಿಸಿದರು.

ಕೂಡಲೇ ದಲಿತರ ಓಣಿಯಲ್ಲಿ ಅಂಗನವಾಡಿ ಕೇಂದ್ರ -2 ಸ್ಥಾಪಿಸಬೇಕು. ಜೆಸ್ಕಾಂ ಇಲಾಖೆಯಡಿ ದಲಿತರಿಗೆ ಸೌಲಭ್ಯ ವಂಚಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಶಾಲೆಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಸಾಯಂಕಾಲ ಸಾರಿಗೆ ‌ಬಸ್ ನಿಲ್ಲಿಸುವಂತಾಗಬೇಕು ಎಂಬ ಬೇಡಿಕೆಗಳ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಸುಭಾಷ್ ಸುಲೇಪೇಟ ಅವರಿಗೆ ಮನವಿ ಸಲ್ಲಿಸಿದರು.

ಈ ಹೋರಾಟದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಜಗದೇವಿ ಕೊಟಪಲ್ಲಿ,ಬಸವರಾಜ ಸೈದಪ್ಪನೂರ, ಶಿವಯೋಗಿ ರುಸ್ತಂಪೂರ, ಮೊಗವನ್ನು ದಾಸ, ರಾಜೇಂದ್ರಪ್ಪ ಚಟನಳ್ಳಿ, ಮಲ್ಲಪ್ಪ ಕೊಟಪಳ್ಳಿ, ಸೈಬಣ್ಣ ವಾಲಿಕಾರ, ಜಗನ್ನಾಥ ಪೂಜಾರಿ, ಗುಂಡಪ್ಪ ಔರಾದಿ, ಇಮಾಮ್ ಪಟೇಲ್, ಅಮೃತ ಮೊತಕಪಳ್ಳಿ, ಮಲ್ಲಿಕಾರ್ಜುನ ದಳಪತಿ, ಶಿವರಾಜ್ ಚಟನಳ್ಳಿ, ಮಂಜುನಾಥ ಬೀರನಳ್ಳಿ, ಗೌತಮ್ ಸೇರಿದಂತೆ ಅನೇಕರು ಇದ್ದರು.