ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹರಿ ಮಂದಿರದ ಬಳಿ ಗಿಡಕ್ಕೆ ಮಂಗಳವಾರ ವೃದ್ಧ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಹತ್ತರಗಿ ಗ್ರಾಮದ ಪರಸಪ್ಪ ಭರಮಾ ಕಡಲಗಿ (82) ಎಂದು ಗುರುತಿಸಲಾಗಿದೆ. ಮೃತರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಠಾಣೆ ಪೋಲಿಸರು ತಿಳಿಸಿದ್ದಾರೆ.