ಜಿಲ್ಲೆ

ವೃದ್ದ ಕಾಣೆ ಸುಳಿವಿಗೆ ಸಹಕರಿಸಲು ಮನವಿ

ಚಾಮರಾಜನಗರ: ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ನಾಗಣ್ಣ ಅಲಿಯಾಸ್ ನಾಗನಾಯಕ ಎಂಬುವವರು ಚಾಮರಾಜನಗರ ಪಟ್ಟಣದಿಂದ ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.

70 ವರ್ಷದ ನಾಗಣ್ಣ 5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ತಲೆಕೂದಲು ಹೊಂದಿದ್ದು, ಎಡ ತೊಡೆಯಲ್ಲಿ ಹಳೆ ಗಾಯದ ಗುರುತು ಇದೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕ್ರೀಮ್ ಕಲರ್ ಚೌಕಳಿ ತುಂಬು ತೋಳಿನ ಶರ್ಟ್, ಬಿಳಿ ಪಂಚೆಯನ್ನು ಧರಿಸಿದ್ದರು. ಇವರ ಸುಳಿವು ದೊರೆತಲ್ಲಿ ಪಟ್ಟಣ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.