ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ವೈದ್ಯರ ಸಂಘದ ಕಾರ್ಯಕ್ರಮದಲ್ಲಿ ಡಾ. ಜಿ.ಡಿ.ನಾರಾಯಣಪ್ಪ ಅವರನ್ನು ಗೌರವಿಸಲಾಯಿತು. ಡಾ. ಟಿ.ನಾರಾಯಣಸ್ವಾಮಿ, ಡಾ. ಎಸ್.ಮನೋಹರ್, ಡಾ. ಪದ್ಮಜಾ, ಡಾ. ನಂದಕಿಶೋರ್, ಡಾ. ರವಿಶಂಕರ್ ಉಡುಪ ಇದ್ದರು. 
ಜಿಲ್ಲೆ

ವೃತ್ತಿಯ ಘನತೆಗೆ ಚ್ಯುತಿ ಬರದಂತೆ ಕೆಲಸ ಮಾಡಿ

Shivamogga - Desk - Megha MS

ತೀರ್ಥಹಳ್ಳಿ: ಮಾನವ ಸೇವೆಯಲ್ಲಿ ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠ. ಈ ವೃತ್ತಿಯ ಘನತೆಗೆ ಚ್ಯುತಿ ಬಾರದಂತೆ ಹಿರಿಯ ವೈದ್ಯರು ಕಿರಿಯರಿಗೆ ಮಾದರಿ ಆಗಿರಬೇಕು ಎಂದು ಮಾಜಿ ಶಾಸಕರೂ ಆಗಿರುವ ಹಿರಿಯ ವೈದ್ಯ ಜಿ.ಡಿ.ನಾರಾಯಣಪ್ಪ ಹೇಳಿದರು. ಪಟ್ಟಣದಲ್ಲಿ ಆಯೋಜಿಸಿದ್ದ ವೈದ್ಯರ ಸಂಘದ ೨೦೨೩-೨೪ನೇ ಸಾಲಿನ ಪದಾಽಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಯಾವುದೇ ವೃತ್ತಿಯಲ್ಲಿ ಹಣಕ್ಕಿಂತ ಘನತೆಗೆ ಪ್ರಾಮುಖ್ಯತೆ ಹೆಚ್ಚು. ವೈದ್ಯರಾಗಿ ಸಮಾಜದಲ್ಲಿ ಗೌರವವನ್ನು ಕಾಪಾಡಿಕೊಳ್ಳುವ ಜತೆಗೆ ವೃತ್ತಿ ಬದುಕಿನ ತೃಪ್ತಿಗಾಗಿಯೂ ಕಾರ್ಯನಿರ್ವಹಿಸಬೇಕಿದೆ ಎಂದು ಅವರು, ಶಸ್ತçಚಿಕಿತ್ಸಾ ತಜ್ಞರಾಗಿ ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ನಾಲ್ಕೂವರೆ ವರ್ಷ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಹಿರಿಯ ವೈದ್ಯರಾದ ಡಾ. ಸದಾಶಿವ ನಿಲುವಾಸೆ, ಡಾ. ರಂಗಸ್ವಾಮಿ, ಡಾ. ರವಿಕುಮಾರ್, ಡಾ. ಶೈಲೇಂದ್ರ ಅವರನ್ನು ಗೌರವಿಸಲಾಯಿತು. ಡಾ. ಟಿ.ನಾರಾಯಣಸ್ವಾಮಿ, ಡಾ. ಎಸ್.ಮನೋಹರ್, ಡಾ. ಪದ್ಮಜಾ, ಡಾ. ನಂದಕಿಶೋರ್, ಡಾ. ರವಿಶಂಕರ್ ಉಡುಪ ಇದ್ದರು. ಅಧ್ಯಕ್ಷರಾಗಿ ಡಾ. ಎಂ.ಸಿ.ಗಣೇಶ್ ಕಾಮತ್, ಕಾರ್ಯದರ್ಶಿಯಾಗಿ ಡಾ. ಕೆ.ವಿ.ಅರವಿಂದ್ ಹಾಗೂ ಖಜಾಂಚಿಯಾಗಿ ಡಾ.ಯು.ಕೆ.ನಂದಕಿಶೋರ್ ಆಯ್ಕೆಯಾಗಿದ್ದಾರೆ.