ಎನ್.ಆರ್.ಪುರ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಯಾವುದೇ ಬ್ಯಾನರ್, ಫೋಟೋ ಹಾಗೂ ಭಿತ್ತಿ ಪತ್ರಗಳನ್ನು ಹಾಕಲು ಅವಕಾಶ ನೀಡಬಾರದು ಎಂದು ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಅನೇಕರು ಫೋಟೋ, ಬ್ಯಾನರ್ ಹಾಕುತ್ತಿದ್ದಾರೆ. ಇನ್ನುಮುಂದೆ ಯಾವುದೇ ಬ್ಯಾನರ್, ಫೋಟೋ ಹಾಕಬಾರದು ಎಂದು ಪಟ್ಟಣ ಪಂಚಾಯಿತಿಯಿಂದ ಸೂಚನಾ ಫಲಕ ಹಾಕಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಡಿಎಸ್‌ಎಸ್ ನಗರ ಸಂಚಾಲಕ ಪಿಕಪ್ ಚಂದ್ರು, ಜಿಲ್ಲಾ ಸಂಚಾಲಕ ರಾಜೇಶ್, ಜಿಲ್ಲಾ ಸಂಘಟನಾ ಸಂಚಾಲಕ ಅಬ್ದುಲ್ ರೆಹಮಾನ್ ಇದ್ದರು.