ತೆಲಸಂಗ ಗ್ರಾಮದ ಬಿ.ವಿವಿ.ಸಂಘದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಹ ನಿರ್ದೇಶಕ ಜಿ.ಬಿ.ಮನ್ನಿಕೇರಿ ಸಮವಸ್ತ್ರ ವಿತರಿಸಿದರು. ಎಂ.ಎಸ್.ಹತ್ತಿ, ಎಸ್.ಜಿ.ದೊಡಮನಿ, ಎಸ್.ಎ.ಹೆಳವರ ಇತರರಿದ್ದರು. 
ಜಿಲ್ಲೆ

ವೀರೇಶ್ವರ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ

ತೆಲಸಂಗ: ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಯಾವ ದಿಕ್ಕಿನಲ್ಲಿ ಬೆಳೆಸುತ್ತದೆಯೋ ಅದೇ ಈ ದೇಶದ ಭವಿಷ್ಯವನ್ನು ಎತ್ತಿ ಹಿಡಿಯುತ್ತದೆ ಎಂದು ಧಾರವಾಡ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಅಪರ ಆಯುಕ್ತರ ಕಾರ್ಯಾಲಯ ಸಹ ನಿರ್ದೇಶಕ ಜಿ.ಬಿ.ಮನ್ನಿಕೇರಿ ಹೇಳಿದರು.

ಗ್ರಾಮದ ಬಿ.ವಿವಿ.ಸಂಘದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡುಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು ಅನ್ನೋದಕ್ಕೆ ಇಲ್ಲಿನ ಬಿವಿವಿ ಸಂಘದ ಶಿಕ್ಷಕರೇ ಸಾಕ್ಷಿ ಎಂದರು.

ಬಸವಲಿಂಗ ಸ್ವಾಮೀಜಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಹಾತ್ಮ ಗಾಂ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ನಿರ್ದೇಶಕ ಎಂ.ಎಸ್.ಹತ್ತಿ, ಹಿರಿಯ ಶಿಕ್ಷಕರಾದ ಎಸ್.ಜಿ.ದೊಡಮನಿ, ಎಸ್.ಎ.ಹೆಳವರ, ಬಿ.ಡಿ.ರೊಟ್ಟಿ, ಮಿನಾಜ ಕಿರಣಗಿ, ಈಶ್ವರ ಕಟವಾಣಿ, ರುಕ್ಮುದೀನ ಮುಜಾವರ ಇತರರಿದ್ದರು.