ಬಸವಕಲ್ಯಾಣ: ಡಾ.ಡಿ.ವೀರೇಂದ್ರ ಹೆಗ್ಗಡೆ ರಾಜ್ಯಸಭೆ ಸದಸ್ಯರಾದ ನಂತರ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪುನಶ್ಚೇತನ ಮತ್ತು ಗುಣಮಟ್ಟದ ಹಾಲು, ಹಾಲಿನ ಪ್ರಮಾಣ ಹೆಚ್ಚಿಸಲು ೨೧ ಕೋಟಿ ರೂ. ಮೀಸಲಿಟ್ಟಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಹೈನುಗಾರಿಕಾ ನಿರ್ದೇಶಕ ಎಸ್.ಎಸ್. ಹಿರೇಮಠ ಸಲಹೆ ನೀಡಿದರು.
ಘಾಟ್‌ಹಿಪ್ಪರಗಾ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಸವಕಲ್ಯಾಣ ಹಾಗೂ ಘಾಟಹಿಪ್ಪರಗಾ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೈನುಗಾರಿಕಾ ಗ್ರಾಮ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕೆಎಂಎಫ್ ನಿವೃತ್ತ ಅಧಿಕಾರಿ ಬಂಡೆಪ್ಪ ಬಿರಾದಾರ ಮಾತನಾಡಿ, ಬೀದರ್, ಯಾದಗಿರಿ, ಕಲಬುರಗಿ ಹಾಲು ಒಕ್ಕೂಟದಿಂದ ವರ್ಷದ ೩೬೫ ದಿನ ಬೆಳಗ್ಗೆ ಮತ್ತು ಸಂಜೆ ಗುಣಮಟ್ಟದ ಆಧಾರದ ಮೇಲೆ ಹಾಲು ಖರೀದಿಸಲಾಗುತ್ತಿದೆ. ಕರ್ನಾಟಕ ಎರಡನೇ ಅತಿ ದೊಡ್ಡ ಸಹಕಾರಿ ಹಾಲಿನ ಸಂಸ್ಥೆಯಾಗಿದೆ ಎಂದರು.
ಗೋವಿನಿAದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ ಎಂಬ ಧ್ಯೇಯ ವಾಕ್ಯ ಹೊಂದಿರುತ್ತದೆ. ನಂದಿನಿ ಬ್ರಾÈಂಡ್ ಹೆಸರಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಗೆ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಇತ್ತೀಚೆಗೆ ಆಕಳು ಮತ್ತು ಎಮ್ಮೆ ಹಾಲಿನ ದರ ಹೆಚ್ಚಾಗಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯರಡಗಿ ಗ್ರಾಪಂ ಸದಸ್ಯ ರಾಜಕುಮಾರ ಭಂಡಾರಿ, ಗ್ರಾಮಸೇವಕ ಲಕ್ಷö್ಮಣ ಜಮಾದಾರ, ಪಶು ವೈದ್ಯಾಧಿಕಾರಿ ಡಾ.ಮಂಜುನಾಥ, ವಿವೇಕಾನಂದ ಮಠಪತಿ, ಮಹಾಂತೇಶ ಎಂಡಿ, ಯುವರಾಜ, ಸೇವಾ ಪ್ರತಿನಿಧಿ ರಂಗಮ್ಮ ಇತರರಿದ್ದರು.