ಜಿಲ್ಲೆ

ವೀರಶೈವ ಲಿಂಗಾಯತರಿಗೆ ಅನ್ಯಾಯ

ಕಲಬುರಗಿ: ರಾಜ್ಯದಲ್ಲಿ ಜಾತಿ ಜನಗಣತಿ ಹೆಸರಿನಲ್ಲಿ ವೀರಶೈವ ಲಿಂಗಾಯತರನ್ನು ಕಡಿಮೆ ತೋರಿಸಿ, ಅನ್ಯಾಯ ಎಸಗಲಾಗುತ್ತಿದ್ದು, ಒಡೆದು ಆಳುವ ಹುನ್ನಾರವನ್ನು ರ‍್ಕಾರ ಮಾಡುತ್ತಿದೆ ಎಂದು ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.

೧೯೭೨ರಿಂದ ವೀರಶೈವ ಲಿಂಗಾಯತರ ೧೦೮ ಉಪ ಜಾತಿಗಳನ್ನು ಒಡೆದು ಆಳುತ್ತಿದ್ದು, ಸಾಮಾಜಿಕ, ರ‍್ಥಿಕ ಮತ್ತು ರಾಜಕೀಯವಾಗಿ ಹೊಡೆತ ನೀಡುವ ಕೆಲಸ ಮಾಡಲಾಗುತ್ತಿದೆ. ಈ ಮಧ್ಯೆ ಪ್ರತ್ಯೇಕ ರ‍್ಮ ಮಾಡಲು ಹೋಗಿ ಪೆಟ್ಟು ತಿಂದಿದ್ದು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೊಮ್ಮೆ ವೀರಶೈವ ಲಿಂಗಾಯತರನ್ನು ಒಡೆಯುವ ಪ್ರಯತ್ನ ನಡೆದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾತಿಗಣತಿಯನ್ನು ಮಾಡಬೇಕಾಗಿರುವುದು ರ‍್ಕಾರದ ರ‍್ತವ್ಯ. ಆದರೆ ಕೆಲವರನ್ನು ಓಲೈಸಲು ಒಂದು ಕೋಣೆಯಲ್ಲಿ ಕುಳಿತು ಅವೈಜ್ಞಾನಿಕ ಸಮೀೆ ಮಾಡಿದ್ದು, ದುರಂತ. ರಾಜ್ಯದ ಎಲ್ಲ ಜಾತಿಗಳಲ್ಲಿಯೂ ಹಲವು ಉಪಪಂಗಡಗಳಿದ್ದು, ಕೇವಲ ವೀರಶೈವ ಲಿಂಗಾಯತರ ಉಪ ಪಂಗಡಗಳನ್ನು ಮಾತ್ರ ವಿಭಜಿಸಿ, ವೀರಶೈವ ಲಿಂಗಾಯತ ಸಮಾಜದ ಸಂಖ್ಯೆ ಕಡಿಮೆ ತೋರಿಸುವ ಹುನ್ನಾರ ನಡೆದಿದ್ದು ಖಂಡನೀಯ ಎಂದರು.

ರ‍್ಕಾರ ಪುನ@ ವೈಜ್ಞಾನಿಕವಾಗಿ ಸಾಮಾಜಿಕ, ಶೈಣಿಕ ಹಾಗೂ ರ‍್ಥಿಕ ಸಮೀೆ ಮಾಡಬೇಕು. ಯಾರದ್ದೋ ಒತ್ತಡಕ್ಕೆ ಮಣಿದು ದಾರಿತಪ್ಪಿದ ವರದಿಯನ್ನು ಮಂಡಿಸಿ, ನರ‍್ಧಾರ ತೆಗೆದುಕೊಂಡರೆ ವೀರಶೈವ ಲಿಂಗಾಯತ ಸಮಾಜದಿಂದ ತಕ್ಕ ಪಾಠ ಕಲಿಯಬೇಕಾಗುತ್ತದೆ. ಸಿಎಂ ಸರಿಯಾದ ನರ‍್ಧಾರ ತೆಗೆದುಕೊಳ್ಳದಿದ್ದರೆ ವೀರಶೈವ ಲಿಂಗಾಯತರಿಂದ ಪ್ರಬಲ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಣ್ಣಾರಾವ ದುತ್ತರಗಾಂವ, ಮಂಜುನಾಥ ರೆಡ್ಡಿ, ದಿವ್ಯಾ ಹಾಗರಗಿ, ದೊಡ್ಡಪ್ಪಗೌಡ ಪಾಟೀಲ್​, ಮಹಾಂತಗೌಡ ಪಾಟೀಲ್​, ಸುನೀಲ ಓಗಿ, ಸಿದ್ರಾಮ ಇಟಗಿ, ಚಂದ್ರಕಾಂತ ಬಿರಾದಾರ, ಶಾಂತಲಿಂಗ ಮಂಥಾ, ಗುರುಭೀಮ ಬೂದಿ, ವೀರು ಸ್ವಾಮಿ ನರೋಣಾ ಇತರರಿದ್ದರು.

ಹೈಕಮಾಂಡ್​ ಮೆಚ್ಚಿಸಲು ಹುನ್ನಾರ: ರಾಜ್ಯದಲ್ಲಿ ಸಿದ್ದರಾಮಯ್ಯ ರ‍್ಕಾರ ಅಧಿಕಾರಕ್ಕೆ ಬಂದಾಗಲೊಮ್ಮೆ ವೀರಶೈವ ಲಿಂಗಾಯತರಲ್ಲಿ ಗೊಂದಲ ಸೃಷ್ಟಿಸಲಾಗುತ್ತದೆ. ಇದೀಗ ಜಾತಿಯನ್ನೇ ಒಡೆದು ಆಳಲಾಗುತ್ತಿದೆ. ಯಾರೊಬ್ಬರ ಮನೆಗೂ ಬಾರದೇ ಜಾತಿ ಜನಗಣತಿ ಮಾಡಿದ್ದೇವೆ ಎಂದು ವರದಿ ಹೇಳುತ್ತಿರುವುದು ಏಕೆ?. ಕಾಂಗ್ರೆಸ್​ ಪದ ಹೈಕಮಾಂಡ್​ ಮೆಚ್ಚಿಸಲು ದುಷತ್ಯ ನಡೆದಿದ್ದು, ಮುಸ್ಲಿಮರಲ್ಲೂ ಜಾತಿ ಇವೆ ಅದನ್ನು ತೋರಿಸಿ. ರಾಜಕೀಯ ಷಡ್ಯಂತ್ರ ನಡೆದಿದ್ದು, ಕಾಂಗ್ರೆಸ್​ನಲ್ಲಿರುವ ಎಲ್ಲ ಶಾಸಕರು ರಾಜೀನಾಮೆ ನೀಡಿ ಹೊರಬಂದು ಬುದ್ಧಿ ಕಲಿಸಬೇಕು ಎಂದು ರವಿ ಬಿರಾದಾರ ಹೇಳಿದರು.