ಜಿಲ್ಲೆ

ವೀರಶೈವ ಲಿಂಗಾಯತ ವೇದಿಕೆಗೆ ಆಯ್ಕೆ

Bidar

ಬೀದರ್: ವೀರಶೈವ ಲಿಂಗಾಯತ ಮಹಾ ವೇದಿಕೆಯ ಬೀದರ್ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್ ಬಟನಾಪುರೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ರಾಗ ಅವರ ನೇತೃತ್ವದಲ್ಲಿ ನಗರದ ವೇದಿಕೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಗುರುಪ್ರಸಾದ ಚಲ್ವಾ (ಅಧ್ಯಕ್ಷ), ಚೇತನ ಪರಾಗೊಂಡೆ (ಉಪಾಧ್ಯಕ್ಷ), ಓಂಕಾರ ಮಜಗೆ (ಪ್ರಧಾನ ಕಾರ್ಯದರ್ಶಿ), ಬಸವಚೇತನ ಬಾಯಲೋಳೆ (ಕಾರ್ಯದರ್ಶಿ) ಹಾಗೂ ನಾಗೇಶ ಹಟಕರ (ಸಂಚಾಲಕ).