ಕಲಬುರಗಿ: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀೆಯ ಪಟ್ಟಿಯಲ್ಲಿ ಹಿಂದು, ವೀರಶೈವ ಲಿಂಗಾಯತ ಜಾತಿಗಳನ್ನು ಕೆಸ್ತರೆಂದು ಉಲ್ಲೇಖಿಸಿ ವೀರಶೈವ ಲಿಂಗಾಯತರನ್ನು ಅಧಿಕೃತವಾಗಿ ಮತಾಂತರಿಸುವ ದುಷತ್ಯಕ್ಕೆ ಕಾಂಗ್ರೆಸ್ ಸರ್ಕಾರವೇ ಮುಂದಾಗಿದ್ದು, ಕೂಡಲೇ ಜಾತಿ ಪಟ್ಟಿಯಿಂದ ಲಿಂಗಾಯತ, ಜಂಗಮ, ಕುರುಬ, ಒಕ್ಕಲಿಗ ಕ್ರಿಶ್ಚಿಯನ್ ಧರ್ಮದ ಪಟ್ಟಿಯನ್ನು ಕೈಬಿಡಬೇಕು ಎಂದು ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಿಂದ ವಿವಿಧ ಪೂಜ್ಯರು ಆಗ್ರಹಿಸಿದರು.
ವೀರಶೈವ, ಲಿಂಗಾಯತ ಜಾತಿಗಳನ್ನು ಒಡೆಯುವ ಷಡ್ಯಂತ್ರ ಸರ್ಕಾರವೇ ಮಾಡುತ್ತಿದೆ. ಜಾತಿಗಳಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡಿ, ದುರ್ಬಲಗೊಳಿಸುವ ಸಂಚು ಇದರಲ್ಲಿ ಅಡಗಿದೆ. ಕೆಸ್ತರ ಹೆಸರಿನಲ್ಲಿ ಮತಾಂತರಿತರು ನಮ್ಮ ಜಾತಿಗಳೊಳಗೆ ನುಸುಳಿ, ನಮ್ಮ ಪಾಲಿನ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಕೂಡಲೇ ಸರ್ಕಾರ ಹಿಂದು ಮತ್ತು ವೀರಶೈವ ಲಿಂಗಾಯತ ಜಾತಿ ಪಂಗಡಗಳೊಂದಿಗೆ ಸೇರಿಸಿರುವ ಕ್ರಿಶ್ಚಿಯನ್ ಪದವನ್ನು ಕೈ ಬಿಟ್ಟು ಸಮೀೆ ನಡೆಸಬೇಕು ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಠಾಧೀಶರು ಆಗ್ರಹಿಸಿದರು.
ಶಿವಸೇನಾ ರಾಜ್ಯಾಧ್ಯಕ್ಷ, ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕಾಂಗ್ರೆಸ್ ಪಕ್ಷವು ರಾಜ್ಯದ ಜನರನ್ನು ಅಭಿವೃದ್ಧಿಯಿಂದ ಮರೆ ಮಾಚಲು ಜಾತಿ, ಧರ್ಮಗಳ ಮಧ್ಯೆ ಒಡಕು ಮೂಡಿಸುತ್ತಿದೆ. 2013, 2023 ಸಿದ್ದರಾಮಯ್ಯ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಾಗಲೆಲ್ಲ ವೀರಶೈವ ಲಿಂಗಾಯತರ ಒಗ್ಗಟ್ಟಿಗೆ ಧಕ್ಕೆ ತರುತ್ತಿದ್ದಾರೆ. ಇದೀಗ ಜಾತಿ ಸಮೀೆ ಹೆಸರಿನಲ್ಲಿ ಹಿಂದುಗಳ ಐಕ್ಯತೆಗೆ ಕೊನೆ ಮೊಳೆ ಹೊಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರಕ್ಕೆ ಜನಗಣತಿ ಮಾಡಲು ಅವಕಾಶವಿಲ್ಲ. ಇದೀಗ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀೆ ಹೆಸರಲ್ಲಿ ಮನೆ ಮನೆಗೆ ಕೆಇಬಿಯವರನ್ನು ಕಳುಹಿಸಿ, ಚೀಟಿ ಮೆತ್ತಿಸುತ್ತಿದ್ದಾರೆ. ಯಾರೂ ಏನು ಕೇಳಿದರೂ ಉತ್ತರಿಸುತ್ತಿಲ್ಲ. ವೀರಶೈವ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ಮಾಡುವ ಕೀಳು ರಾಜಕಾರಣ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು, ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು, ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಶ್ರೀ ಪಂಚಾಕ್ಷರಿ ಮಹಾಸ್ವಾಮೀಜಿ, ಶ್ರೀ ಅಭಿನವಸಿದ್ಧಲಿಂಗೇಶ್ವರ ಸ್ವಾಮೀಜಿ, ಶ್ರೀ ಶಂಭುಲಿಂಗ ಸ್ವಾಮೀಜಿ, ಶ್ರೀ ಸಿದ್ಧವಿರ ಶಿವಾಚಾರ್ಯರು, ಶ್ರೀ ಗುರುಕೊಟ್ಟುರೇಶ್ವರ ಶ್ರೀ, ರಾಜಕುಮಾರ ಪಾಟೀಲ್ ತೇಲ್ಕೂರ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಕಲ್ಯಾಣಪ್ಪ ಪಾಟೀಲ್ ಮಳಖೇಡ ಇತರರಿದ್ದರು.