ದೇವರಹಿಪ್ಪರಗಿ : ವೀರಶೈವ ಧರ್ಮದ ಒಳಪಂಗಡಗಳ ಎಲ್ಲಾ ಜನರು ಸಮನ್ವಯ ಭಾವನೆಯಿಂದ ಸಂಟಿತರಾಗಬೇಕೆಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು.
ಪಟ್ಟಣದ ಜಡಿಮಠದಲ್ಲಿ ಬುಧವಾರ ಜರುಗಿದ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಸಣ್ಣ ಸಣ್ಣ ಸಮುದಾಯಗಳ ಜನತೆ ಸಂಟನೆಯ ಮೂಲಕ ಬೆಳವಣಿಗೆ ಹೊಂದಿ ಸದೃಢಗೊಳ್ಳುತ್ತಿದ್ದಾರೆ. ಆದರೆ ಬಹುಸಂಖ್ಯಾತರಾಗಿರುವ ವೀರಶೈವ ಧರ್ಮದ ಜನರು ಜಾತಿಯಾಧರಿಸಿ ಛಿದ್ರಗೊಳ್ಳುತ್ತಿದ್ದಾರೆ. ಜತೆಗೆ ಈಗ ಇರುವಂತ ಅಸ್ತಿತ್ವವನ್ನು ಕಳೆದುಕೊಳ್ಳಲು ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಎಚ್ಚರಿಕೆ ಕೊಡಬೇಕಾಗಿದ್ದು ಧರ್ಮಪೀಠಗಳ ಕರ್ತವ್ಯ ಎಂದರು.
ಸಮಾಜದ ಎಲ್ಲ ವರ್ಗದ ಜನ, ಎಲ್ಲ ಒಳಪಂಗಡಗಳ ಸಮಾಜದ ಮುಖಂಡರು ವೀರಶೈವ ಪೀಠಗಳ ಮಾರ್ಗದರ್ಶನದಲ್ಲಿ ಸಮಾಜ ಕಟ್ಟುವ ಕಾರ್ಯ ಮಾಡಬೇಕಾಗಿದೆ. ಮಕ್ಕಳಿಗೆ ಶಿಣದ ಜತೆಗೆ ಧಾರ್ಮಿಕ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.
ಇಂದು ನಾವು ಇರುವುದು ವಿಜ್ಞಾನ ಯುಗದಲ್ಲಿ. ವಿಜ್ಞಾನ ಮಾನವ ಕುಲಕ್ಕೆ ಪೂರಕವಾಗಿರಬೇಕೆ ವಿನಹ@ ಮಾರಕವಾಗಿರಬಾರದು. ನಾಗರಿಕತೆ ನೆಪದಲ್ಲಿ ನಮ್ಮ ಸಂಸತಿ, ಆಚಾರ, ವಿಚಾರಗಳನ್ನು ಮರೆಯಬಾರದು. ರಾಜಕೀಯದಲ್ಲಿ ಧರ್ಮವಿರಲಿ. ಆದರೆ ಧರ್ಮದಲ್ಲಿ ರಾಜಕೀಯ ಬೇಡ. ಮಠಗಳಿಗೆ ಭೌತಿಕ ಆಸ್ತಿ ಮುಖ್ಯವಲ್ಲ. ಸಂಸ್ಕಾರವಂತ ಭಕ್ತರೇ ಮಠಗಳ ನಿಜವಾದ ಆಸ್ತಿಯಾಗುತ್ತಾರೆ. ವೀರಶೆವ ಧರ್ಮ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ತತ್ವದ ಮೂಲಕ ಮಾನವೀಯತೆ ಸಾರುತ್ತಿದೆ ಎಂದರು.
ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಸ್ವಾಮೀಜಿ, ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಶ್ರೀಗಳು ಮಾತನಾಡಿದರು. ಜಡಿಸಿದ್ಧೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಡಿಸಿದ್ಧೇಶ್ವರ ಶ್ರೀಗಳ ಪಟ್ಟಾಧಿಕಾರ ವರ್ಧಂತಿ ಪ್ರಯುಕ್ತ ಮಂಗಲಸ್ನಾನ ಹಾಗೂ ತುಲಾಭಾರ ಜರುಗಿತು.
ಕನ್ನೂರಿನ ಸೋಮನಾಥ ಶ್ರೀ, ಗಿರಿಸಾಗರದ ರುದ್ರಮುನಿ ಶ್ರೀ, ದೇವೂರಿನ ಮರುಳಾರಾಧ್ಯ ಶ್ರೀ, ಬಸವನಬಾಗೇವಾಡಿಯ ಶಿವಪ್ರಕಾಶ ಶ್ರೀ, ಮನಗೂಳಿಯ ಅಭಿನವ ಸಂಗನಬಸವ ಶ್ರೀ, ಸಗರ ಹಿರೇಮಠದ ಮರುಳಮಹಾಂತ ಶ್ರೀ, ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತನೇತ್ರ ತ ಪ್ರಭುಗೌಡ ಬಿ.ಎಲ್. (ಚಬನೂರ), ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ (ಪಡಗಾನೂರ), ಡಾ. ಆರ್.ಆರ್. ನಾಯಿಕ್, ಡಾ. ವೆ.ಎಸ್. ಪಾಟೀಲ, ಸಿ.ಕೆ. ಕುದರಿ, ಎಂ.ಆರ್. ಶಿರಸಂಗಿಮಠ ಇದ್ದರು.